ಪಿಡಿಎ ಇಂಜಿನಿಯರಿಂಗ್ ಕಾಲೇಜು: ಒಂದು ದಿನದ ಗುಣಮಟ್ಟ, ಅಭಿವೃದ್ಧಿ ತರಬೇತಿ ಶಿಬಿರ
ಕಲಬುರಗಿ,ಮೇ.13- ಇಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್ ವಿಭಾಗದಿಂದ ಐಈಟಿಇ ಸಂಯೋಗತ್ವದಲ್ಲಿ ಆಯೋಜಿಸಲಾದ ಇಂಟ್ರೊಡಕ್ಷನ್ ಟು ಸ್ಪೀಚ್ ಪೆÇ್ರೀಸೆಸಿಂಗ್ ಅಂಡ್ ಪ್ರಾಜೆಕ್ಟ್ ಅವಿನಿ ಕುರಿತ ಒಂದು ದಿನದ ಗುಣಮಟ್ಟ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಉಪ್ಪನ್ಯಾಸಕರಾಗಿ ನ್ಯಾಷನಲ್ ಇನ್ಸ್ತೋಕ್ ಟೆಕ್ನಾಲಜಿ ಸೂರತ್ಕಲ್ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ್ ಜಿ ಕುಳಗುಡಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಕಾಂತ್ ಆರ್ ಮೀಸೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉಪ ಪ್ರಾಚಾರ್ಯರು ಮತ್ತು ಸಹ ಸಂಘಟನಾ ಅಧ್ಯಕ್ಷರಾದ ಡಾ. ಎಸ್.ಆರ್ ಹೊಟ್ಟಿ ಮತ್ತು ಡಾ. ಶ್ರೀದೇವಿ ಸೋಮ. ಟಿ ಮತ್ತು ಪಿ ಆಫಿಸರ್ ಡಾ. ಮಹದೇವಪ್ಪ ಗಾದಿಗೆ, ಎಚ್‍ಓಡಿ, ಡೀನ್, ವಿಭಾಗದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಅಗರ್ ಖೇಡ್ ರವರು ಸ್ವಾಗತಿಸಿದರು ಕಾರ್ಯಕ್ರಮದ ಸಂಯೋಜಕರಾದ ಡಾ. ಅಮರೇಶ್ವರ ಪಾಟೀಲ್ ಮುಖ್ಯ ಉಪನ್ಯಾಸಕರ ಪರಿಚಯ ಮಾಡಿದರು ಮತ್ತು ಪೆÇ್ರಫೆಸರ್ ಸ್ಮಿತಾ ಪಡಶೆಟ್ಟಿ ವಂದಿಸಿದರು ಈ ಕಾರ್ಯಕ್ರಮಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ ನಮೋಶಿ ನವರು ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.