ರಸ್ತೆ ಅಪಘಾತದಲ್ಲಿ ದಂಪತಿ ದುರ್ಮರಣ
ಕಲಬುರಗಿ,ಮೇ.13-ಆಳಂದ ತಾಲ್ಲೂಕಿನ ಮೈಂದರ್ಗಿ ಮಡ್ಡಿ ಹತ್ತಿರ ಇಂದು ಮಧ್ಯಾಹ್ನ ಬುಲೆರೋ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿ ಹೊರಟಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮಾದನಹಿಪ್ಪರಗಾ ಗ್ರಾಮದ ಗುರುಸಿದ್ದಯ್ಯ (45) ಮತ್ತು ಅವರ ಪತ್ನಿ ಮಧುಮತಿ (42) ಎಂದು ಗುರುತಿಸಲಾಗಿದೆ.
ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.