ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ
ಕಲಬುರಗಿ,ಮೇ.13-ಆಳಂದ್ ಚೆಕ್‍ಪೋಸ್ಟ್ ಹತ್ತಿರದ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ರವೀಂದ್ರಕುಮಾರ, ಶಿವಕುಮಾರ, ಯಲ್ಲಪ್ಪ, ಅಶೋಕ ಕಟಕೆ, ನಾಗರಾಜ, ಸಂಜೀವಕುಮಾರ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಆಳಂದ್ ಚೆಕ್‍ಪೋಸ್ಟ್ ಏರಿಯಾ ನಿವಾಸಿ ಸುರೇಶ ಸಾಸನಕೇರ (32) ಎಂಬಾತನನ್ನು ಬಂಧಿಸಿ 9,654 ರೂ.ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.