ಜೂಜಾಟ: 8 ಜನರ ಬಂಧನ
ಕಲಬುರಗಿ,ಮೇ.13-ಕಲ್ಲಹಂಗರಗಾ ಗ್ರಾಮದ ಹುಸೇನ್ ಸಾಗರ ಗುಡಿ ಹತ್ತಿರವಿರುವ ಅರಳಿ ಮರದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಐ ಫಸಿಯುದ್ದಿನ್, ಸಿಬ್ಬಂದಿಗಳಾದ ಕುಮಾರ, ಶಿವರಾಜ, ಶ್ರೀನಿವಾಸ, ಅಜಯಕುಮಾರ ಹಾಗೂ ಶಿವಕುಮಾರ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಬಸವರಾಜ ಕವಲಗಿ, ರವಿ ಗೌಂಡಿ, ಸಂಜುಕುಮಾರ ಮರಾಠ, ಸಕೋಜಿ ಮರಾಠ, ಯಶ್ವಂತ ಮರಾಠ, ದತ್ತು ಗೌಂಡಿ, ರಾಜೇಂದ್ರ ಮರಾಠ, ಮಲ್ಲಿಕಾರ್ಜುನ ಹೂಗಾರ ಎಂಬುವವರನ್ನು ಬಂಧಿಸಿ 10,760 ರೂ.ನಗದು ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.