ಜಾತಿ ರಹಿತ ಸಮಾಜದ ಚಿಂತಕ ಬಸವಣ್ಣ : ಸುಭಾಸ ಗುಡಿಮನಿ
ವಿಜಯಪುರ,ಮೇ.13: ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಸಮಾಜದ ರಚನೆ ಮೂಲ ಮಂತ್ರವಾಗಿತ್ತು. ಅಂತರಜಾತಿ ವಿವಾಹ ಬಸವಣ್ಣನವರ ತತ್ವಗಳು ನಮ್ಮೆಲ್ಲರ ರಕ್ತಗತವಾಗಿ ರೂಢಿಸಿಕೊಳ್ಳಬೇಕು. ಜಾತಿರಹಿತ ಸಮಾಜಕ್ಕೆ ಮನ್ನಣೆ ನೀಡಿ ಅದರಂತೆ ಬದುಕಿದವರು. ಅನೇಕ ಮಠಗಳು ಬಸವಣ್ಣನವರ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿರುವದು ಶ್ಲಾಘನೀಯ ಎಂದು ವಿಶ್ರಾಂತ ಪೆÇೀಲಿಸ ವರಿμÁ್ಠಧಿಕಾರಿ ಸುಭಾಸ ಗುಡಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಶ್ರೀ ಬಸವಣ್ಣನವರ ಕುರಿತು ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ವಚನಗಳನ್ನು ಅರ್ಥ ಮಾಡಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಚಿಂತನೆ ವಿಷಯ ಕುರಿತು ಉಪನ್ಯಾಸ ನೀಡಿದ ಶರಣ ಚಿಂತಕ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿ, ವಿಶ್ವಕ್ಕೆ ವಚನದ ಮೂಲಕ ಜ್ಞಾನದ ಬೆಳಕು ನೀಡಿದ ವಿಶ್ವ ಗುರು ಬಸವಣ್ಣ. ವೈಚಾರಿಕ ಕಲ್ಪನೆ ಮೂಲಕ ಸಮ ಸಮಾಜ ರಚಿಸಿದವರು ಬಸವಣ್ಣ. ಕಾಯಕಕ್ಕೆ ಪ್ರಧಾನ ಸ್ಥಾನ ನೀಡಿದವರು ಅಪ್ಪ ಬಸವಣ್ಣನವರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು .
ಬಸವಣ್ಣನವರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದ ಡಾ. ಮಾಧವ ಗುಡಿ. ಸಾಮಾಜಿಕ ಕ್ರಾಂತಿ ಮಾಡಿದ ಪ್ರಥಮರು. ದಯವಿಲ್ಲದ ಧರ್ಮಕ್ಕೆ ಮಹತ್ವವಿಲ್ಲ. ಸಕಲ ಜೀವಿಗಳಿಗೆ ಲೇಸನ್ನು ಬಯಸುವದೆ ಮಾನವೀಯ ಮೌಲ್ಯ. ಮೌಢ್ಯಗಳನ್ನು ಸಮಾಜದಿಂದ ಕಿತ್ತು ಹಾಕುವ ಬಸವಣ್ಣನವರ ಸಂಕಲ್ಪವಾಗಿತ್ತು . ಇಂದು ಬಸವಣ್ಣನವರ ವಿಚಾರಗಳನ್ನು ವಿಶ್ವವೇ ಸ್ವೀಕರಿಸಿದೆ ಎಂದರು. ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆಗಳು ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಿಲ್ಪಾ ಬಸ್ಮೆ, ಅಂತರಜಾತಿಯ ವಿವಾಹದಿಂದ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಪ್ರಸಾದ ಸೇವೆಯಲ್ಲಿ ಬೇಧÀ ಮಾಡದೇ ಒಂದೇ ಪಂಕ್ತಿಯಲ್ಲಿ ಪ್ರಸಾದ ಮಾಡಬೇಕಾಗಿದ್ದರಿಂದ ಅನೇಕರು ಬಸವಣ್ಣನವರಿಗೆ ವಿರೋಧವಾಯಿತು. ಜಾತಿ, ಮತ, ಪಂಥಗಳು ಸಮಾಜದಿಂದ ದೂರಾಗಬೇಕು ಎಂದು ಪ್ರತಿಪಾದಿಸಿದ ಬಸವಣ್ಣನವರನ್ನು ಬಿಜ್ಜಳ ಅರಸ ಚಾಡಿಮಾತು ಕೇಳಿ ಅವರನ್ನು ಅರಮನೆಯಿಂದ ಹೊರಹಾಕಿದರು ಎಂದರು .
ಸಭೆಯ ಅಧ್ಯಕ್ಷತೆ ವಹಿಸಿದ ಬಸವರಾಜ ಆಜೂರ ಮಾತಾನಾಡಿ, ಬಸವಣ್ಣನವರು ನಮ್ಮ ಜಿಲ್ಲೆಯಲ್ಲಿ ಜನ್ಮ ತಾಳಿದ್ದರಿಂದ ನಮ್ಮೆಲ್ಲರಿಗೂ ಹೆಮ್ಮೆ. ಬಸವ ಚಿಂತನೆಗಳು ಅತ್ಯವಶ್ಯ ಎಂದರು
ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆÇ್ರ. ಸುಭಾಷÀಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಅನ್ನಪೂರ್ಣ ಬೆಳ್ಳನವರ ನಿರೂಪಿಸಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಪ್ರಾಚಾರ್ಯ ಸಿದ್ರಾಮಯ್ಯ ಲಕ್ಕುಂಡಿಮಠ. ವಿದ್ಯಾವತಿ ಅಂಕಲಗಿ. ರಾಜೇಸಾಬ ಶಿವನಗುತ್ತಿ. ಪೆÇ್ರ ಸಿದ್ದು ಸವಳಸಂಗ, ಅಹಮ್ಮದ ವಾಲೀಕಾರ, ಟಿ.ಆರ್. ಹಾವಿನಾಳ, ಶಾಂತಾ ವಿಭೂತಿ, ಶೇಷರಾವ ಮಾನೆ. ಎಂ.ಎಂ. ಖಲಾಸಿ, ಮಡಿವಾಳಮ್ಮ ನಾಡಗೌಡ, ಸುರೇಶ ಪೂಜಾರಿ, ಸಂಗಮೇಶ ಕರೆಪ್ಪಗೋಳ, ಗಂಗಮ್ಮ ರೆಡ್ಡಿ, ಪ್ರಕಾಶಸಿಂಗ್ ರಜಪೂತ, ಚೈತನ್ಯ ಮುದ್ದೇಬಿಹಾಳ, ಲಕ್ಷ್ಮಿ ಬಿರಾದಾರ, ಜಿ.ಎಸ್ ಬಳ್ಳೂರ ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪೂಜಾ ಅಂಗಡಿ. ರಾಗಿಣಿ ಪೂಜಾರ. ಚೈತ್ರಾವತಿ ನೀಲಪ್ಪನವರ ವಚನ ಗಾಯನ ಮಾಡಿದರು.
ನೂತನವಾಗಿ ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾಯ್.ಟಿ. ಪಾಟೀಲ, ಸಿ.ಎಸ್. ಝಳಕಿ, ಆನಂದ ಕೆಂಬಾವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.