ರಾಜು ಆಲಗೂರ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲವು:ದೊಡಮನಿ
ತಾಳಿಕೋಟೆ:ಮೇ.13: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಮಿಸಲು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಪ್ರೋ.ರಾಜು ಆಲಗೂರ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾದಿಸಲಿದ್ದಾರೆಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ ಅವರು ಹೇಳಿದರು.
ಬುಧವಾರರಂದು ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಭಾರಿಯ ಲೋಕಸಭೆ ಚುನಾವಣೆಯು ಪ್ರಜ್ಞಾವಂತರ ನಿಲುವಿನ ಮೇಲೆ ನಿಂತಿತ್ತು ಕಳೆದ 10 ವರ್ಷಗಳಿಂದ ವಿಜಯಪುರ ಜಿಲ್ಲೆಗೆ ಸಂಸದರಾಗಿದ್ದವರು ಏನೂ ಕೊಡುಗೆಗಳನ್ನು ನೀಡಲಿಲ್ಲಾ ಕೇವಲ ಅಧಿಕಾರದ ಲಾಲಸೆ ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿದ್ದರು ಇದನ್ನು ಎಲ್ಲ ಮತದಾರರು ಅರ್ಥೈಸಿಕೊಂಡಿದ್ದಾರೆ ಇದರ ಪರಿಣಾಮ ಈ ಭಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಿಗಜಿಣಗಿ ಅವರು ಅಧಿಕಾರ ಅನುಭವಿಸಿ ಜನರಿಗೆ ದ್ರೋಹ ಬಗೆದವರು ಸೋಲನ್ನು ಅನುಭವಿಸಲಿದ್ದಾರೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ನುಡಿದಂತೆ ನಡೆದಂತಹ ಪಕ್ಷವಾಗಿದೆ ರಾಜ್ಯದ ಮಹಿಳೆಯರ ಪರವಾದ ಸರ್ಕಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಚುನಾವಣೆ ಪೂರ್ವದಲ್ಲಿ ನೀಡಿದಂತಹ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಅನುಕೂಲ ಕಲ್ಪಿಸಿದೆ ಈ ನಿಟ್ಟಿನಲ್ಲಿ ಎಲ್ಲ ಬಡ ಮತ್ತು ಮಧ್ಯಮ ವರ್ಗದ ಮತದಾರರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರೋ.ರಾಜು ಆಲಗೂರ ಅವರ ಪರವಾಗಿ ನಿಂತಿದ್ದಾರೆ ಈ ಭಾರಿ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರದಲ್ಲಿ ಬದಲಾವಣೆ ಗಾಳಿ ಹೇಗೆ ಬೀಸಿದಿಯೋ ಅಷ್ಟೇ ಪ್ರಭಲವಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಕಾಂಗ್ರೇಸ್ ಪಕ್ಷವು ಜಯ ಭೇರಿ ಭಾರಿಸಲಿದೆ ಎಂದ ದೊಡಮನಿ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದು ಈ ಭಾರಿ ದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರವು ರಚನೆಯಾಗುವದು ಶತಃಸಿದ್ದವೆಂದು ಹೇಳಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ ಅವರು ಸುಂದರ ಸದೃಢ ಭಾರತ ನಿರ್ಮಾಣಕ್ಕೆ ಕಾಂಗ್ರೇಸ್ ಪಕ್ಷ ಸದಾ ಸಿದ್ದವಿದೆ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಮುಂದಾಳತ್ವ ವಹಿಸುವದರೊಂದಿಗೆ ಉತ್ಸಾಹದೊಂದಿಗೆ ಪಾಲ್ಗೊಂಡ ಎಲ್ಲ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮತ್ತು ಯುವ ಸಮೂಹಕ್ಕೆ, ಅಭಿಮಾನಿಗಳಿಗೆ, ಪಕ್ಷದ ಹಿತೈಷಿಗಳು, ಮತ್ತು ಎಲ್ಲ ಮತದಾರ ಬಂದುಗಳಿಗೆ ಅಭಿನಂದಿಸುವದಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಗೌಡ ದೊಡಮನಿ ಅವರು ಹೇಳಿದರು.
ಈ ಸಮಯದಲ್ಲಿ ಮುಖಂಡರುಗಳಾದ ನ್ಯಾಯವಾದಿ ಆನಂದ ಮದರಕಲ್ಲ, ಸೋಮನಗೌಡ ಆನೇಸೂರ ಮೊದಲಾದವರು ಇದ್ದರು.