ತಾಯಿ ಇಲ್ಲದ ಜಗವು ಬರಿಶೂನ್ಯ : ಡಾ. ಎಕ್ಕೆಳ್ಳೆ
ಔರಾದ :ಮೇ.13: ಅವ್ವ ಎಂದರೆ ತ್ಯಾಗ ಮತ್ತು ಪ್ರೀತಿಯ ಸ್ವರೂಪಳಾಗಿದ್ದು, ಅವಳ ಋಣ ಯಾಗೊತ್ತಿಗೂ ತಿರಿಸಲು ಆಗಲಾರದು, ಅಮ್ಮಯಿಲ್ಲದೇ ಜಗವೇ ಬರಿಶೂನ್ಯವಾಗಿದೆ ಎಂದು ಬೀದರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ . ಜ್ಯೋತಿ ಎಕ್ಕೆಳ್ಳೆ ನುಡಿದರು.
ತಾಲೂಕಿನ ವಡಗಾಂವ(ದೇ)ದಲ್ಲಿ ರವಿವಾರ ಆರಾಧ್ಯ ಬೇಸಿಗೆ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಸಸಿಗೆ ನಿರೇರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯ, ಅವ್ವ ಎಂದರೆ ಆಸರೆ, ಅವ್ವ ಎಂದರೆ ಹೋರಾಟ, ಅವ್ವ ಎಂದರೆ ತ್ಯಾಗ, ಅವ್ವ ಎಂದರೆ ಪ್ರೀತಿ, ಅವ್ವ ಎಂದರೆ ವಾತ್ಸಲ್ಯ. ಹಾಗಾಗಿ ಆಕೆಯನ್ನು ಏನೆಂದು ವರ್ಣಿಸಿದರೂ ಅದು ಕಡಿಮೆಯಾಗುತ್ತದೆ. ಅಮ್ಮ ಎನ್ನುವ ಶಕ್ತಿ ಯಲ್ಲಿ ಜಗತ್ತೇ ಅಡಗಿದೆ. ಅವಳಿಲ್ಲದೇ ಜೀವನವೇ ಬರಿಶೂನ್ಯವಾಗಿದೆ. ಎಲ್ಲರು ತಾಯಂದಿರನ್ನು ಗೌರವಿಸಿ ಅವರ ಋಣ ತೀರಿಸಬೇಕು ಎಂದರು.
ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಕೂಡಾ ನಮ್ಮನ್ನು ಜನ್ಮ ನೀಡಿದ ತಾಯಂದಿರಿಗೆ ಪೂಜೆ ಗೌರವ ಸಲ್ಲಿಸಲು ಈ ವರ್ಷವು ಕೂಡಾ ಅಧ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಂಡು ತಾಯಂದಿರಿಗೆ ಗೌರವಿಸಿ ಅವರ ಪಾದಗಳಿಗೆ ನಮಿಸಿ ಸನ್ಮಾನ ಮಾಡಿದ್ದೆವೆ. ತಾಯಂದಿರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮೀತವಾಗದೇ ದಿನಾಲು ಆಚರಿಸುವಂತಾಗಬೇಕು. ಮನೆಯಲ್ಲಿ ಮುಂಜಾನೆ ಎದ್ದ ತಕ್ಷಣ ಎಲ್ಲರು ತಂದೆ ತಾಯಂದಿರಿಗೆ ನಮಸ್ಕರಿಸಿದರೇ ಮಾತ್ರ ಅವರ ಬದುಕು ಬಂಗಾರವಾಗುತ್ತದೆ ಎಂದರು.
ಸಂಪನ್ಮೂಲ ಶಿಕ್ಷಕ ಸಂತೋಷ ಮಹಾರಾಜವಾಡೆ ಮಾತನಾಡಿ, ತಾಯಿಗೆ ಸರಿಸಾಟಿ ಯಾರು ಇರಲು ಸಾಧ್ಯವಿಲ್ಲ. ಅವಳಿಗೆ ಅವಳೇ ಸಾಟಿ ಮತ್ತು ಸ್ಫೂರ್ತಿ. ಆ ಸ್ಥಾನಕ್ಕೆ ಅವಳೇ ಅಮೃತ ಕಳಶ. ನವ ಮಾಸ ತನ್ನ ಗರ್ಭದಲ್ಲಿ ಬಚ್ಚಿಟ್ಟುಕೊಂಡು ಪೆÇೀಷಿಸುವ ತಾಯಿ ತನ್ನ ಮಗು ಮೊದಲ ಹೆಜ್ಜೆಯನ್ನು ಭೂಮಿಗೆ ಇಟ್ಟ ದಿನದಿಂದ ಹಿಡಿದು ಮಗು ದೊಡ್ಡವನಾಗಿ ತನ್ನ ಹಾಗೇ ವಯಸ್ಸಾದರೂ ಕೂಡ ಸೆರಗಿನಲ್ಲಿ ಅವುಚಿಕೊಂಡು ಮಮತೆಯ ನೆರಳನ್ನು ಸೂಸುತ್ತಾಳೆ ಎಂದರು.
ಕಾರ್ಯಕ್ರಮದಲ್ಲಿ ಆರಾಧ್ಯ ಬೇಸಿಗೆ ತರಬೇತಿ ಕೇಂದ್ರದ ಮಕ್ಕಳಿಂದ ತಾಯಿಗೇ ನಮನ ಸಲ್ಲಿಸುವ ಅನೇಕ ಮನೋರಂಜನಾ ಹಾಗು ಮನ ಕರಗುವ ನಾಟಕ ಮತ್ತು ಕಲೆಗಳ ಪ್ರದರ್ಶನ ಜರುಗಿದವು. ಎಲ್ಲ ತಾಯಂದಿರಿಗೆ ಗೌರವಿಸಿ, ಸನ್ಮಾನಿಸಿ ತಾಯಂದಿರ ದಿನಾಚರಣೆಗೆ ಶೋಭೆ ತರಲಾಯಿತು.
ಈ ಸಂದರ್ಭದಲ್ಲಿ ನಸೀಮಾಬೇಗಮ್, ಶ್ರೀದೇವಿ ಗೌಡಾ, ಡಾ. ಸಿದ್ದರೆಡ್ಡಿ ಬಿರಾದರ್, ರತಿಕಾಂತ ನೇಳಗೆ, , ಚಂದ್ರಕಾಂತ ಫುಲೆ, ಸಿದ್ದಪ್ಪ, ಪ್ರೀಯಾಂಕಾ, ಅಂಬಿಕಾ, ರೇಣುಕಾ, ಸೋನಿ, ಪೂಜಾ, ಆಕಾಶ ಇತರರಿದ್ದರು. ಶಿಕ್ಷಕ ಹಾವಗಿರಾವ್ ನೇಳಗೆ ವಂದಿಸಿ ನಿರೂಪಿಸಿದರು.