ಸಮಾನತೆಯ ಹರಿಕಾರ ಬಸವಣ್ಣ: ಸವಿತಾ ವೆಂಕಟೇಶ
ಬೀದರ್: ಮೇ.13:ನಗರದ ಬಾಲ ಭವನ ಹತ್ತಿರ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದಿಂದ ನಡೆಯುತ್ತಿರುವ ಸಾಂತ್ವನ ಇತ್ತಿಚೀಗೆ 891ನೇ ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಬಹಿಸಿದ ಸವಿತಾ ವೆಂಕಟೇಶ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾಲಾರ್ಪಣೆಗೈದು ಮಾತನಾಡಿದರು.
ಬಸವಣ್ಣನವರು ಸಮಾನತೆಯ ಹರಿಕಾರ, ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿ ಮಾಡಿ ವಿಶ್ವಗುರುವಾಗಿದ್ದರು. ಅವರ ಆದರ್ಶ ಇಂದಿನ ಪ್ರಜಾಪ್ರಭುತ್ವ ದೇಶಗಳಿಗೆ ಭದ್ರ ಬುನಾದಿಯಾಗಿದೆ. ಬಸವಣ್ಣನವರ ತತ್ವಗಳು ಎಲ್ಲ ಧಮಘದಲ್ಲಿ ಅಡಗಿವೆ ಎಂದರು.
ಮಹಿಳಾ ಮಂಡಳದ ಆಪ್ತ ಸಮಾಲೋಚಕ ಮನೋಹರ ಸಾಳುಂಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ಜಾತಿ, ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿ 770 ಅಮರ ಗಣಂಗಳಿಗೆ ಅನುಭವ ಮಂಟಪದ ಮೂಲಕ ಭಕ್ತಿ ಹಾಗೂ ಜ್ಞಾನ ದಾಸೋಹ ಧಾರೆ ಎರೆದ ಮಹಾನ ಸಂತ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಾಂತ್ವನ ಕೇಂದ್ರ ಹಾಗೂ ಮಹಿಳಾ ಮಂಡಳದ ಸಿಬ್ಬಂದಿಗಳು ಇದ್ದರು.