ಡಿ.ಸಿ ಕಚೇರಿಯಲ್ಲಿ ಶಂಕರಾಚಾರ್ಯ ಜಯಂತಿ
ಬೀದರ್:ಮೇ.13: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿನ್ನೆ ಆದಿ ಗುರು ಶಂಕರಾಚಾರ್ಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೀದರ್ ತಹಸಿಲ್ದಾರರು ಗುರು ಶಂಕರಾಚಾರ್ಯರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾಪರ್ಣಿಮಾಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಪ್ರ ಸಮಾಜ ಮತ್ತು ವಿಶ್ವಕರ್ಮ ಸಮಾಜದ ಅನೇಕ ಮುಂಖಡರು ಭಾಗವಹಿಸಿದರು.
ನಿವೃತ್ತ ಉಪನ್ಯಾಸಕ ಶಾಮಕಾಂತ ಕುಲಕರ್ಣಿ ಅವರು ಆದಿ ಶಂಕರಾಚಾರ್ಯರ ಜೀವನ ಕುರಿತು ಸಭೆ ಉದ್ದೇಶಿಸಿ ಮಾತನಾಡಿದರು. ಆದೇ ರೀತಿ ಇನ್ನೊರ್ವ ಮುಖಂಡ ವಿಜಯಕುಮಾರ ವಿಶ್ವಕರ್ಮ ಅವರು ಈ ನಾಡಿನ ಬಗ್ಗೆ ಆದಿ ಶಂಕರಾಚಾರ್ಯ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ
ವಿಪ್ರ ಬ್ರಹ್ಮಣ ಸಮಾಜದ ಮುಖಂಡರಾದ
ಮನೋಹರ ದಂಡೆ ರಮೇಶ ಕುಲಕರ್ಣಿ, ಜಿಲ್ಲಾ ಬ್ರಹ್ಮಣ ಸಮಾಜ
ಅಧ್ಯಕ್ಷರಾದ ಅನಂತ ಕುಲಕರ್ಣಿ, ಬಾಬುರಾವ ಕುಲಕರ್ಣಿ, ಕೆದಾರ ದೇಶಪಾಂಡೆ, ಪುರುಷೋತ್ತಮ ಪುರೋಹಿತ,
ವಿಶ್ವಕರ್ಮ ಸಮಾಜದ ಮುಖಂಡರಾದ ಚಂದ್ರಕಲಾ ವಿಶ್ವಕರ್ಮ ಪ್ರಶಾಂತ ವಿಶ್ವಕರ್ಮ ಸೇರಿದಂತೆ ವಿಶ್ವಕರ್ಮ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು