ನೈತಿಕ ಪೋಲಿಸ್ ಗಿರಿ: ಮೂವರು ಯುವಕರು ಅರೆಷ್ಟ್
ಬೀದರ್: ಮೇ.13:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಗ್ರಾಮದ ಬಳಿ ಮುಸ್ಲಿಂ ಯುವತಿಯನ್ನು ತನ್ನ ಪ್ಯಾಸೆಂಜರ್ ಆಟೋದಲ್ಲಿ ಬಾಡಿಗೆ ಕರೆದುಕೊಂಡು ಹೋದ ಆಟೋ ಚಾಲಕನನ್ನು ಅಡ್ಡಗಟ್ಟಿದ ಯುವಕರು ಥಳಿಸಿ ನೈತಿಕ ಪೆÇಲೀಸ್?ಗಿರಿ ಪ್ರದರ್ಶಿಸಿರುವ ಘಟನೆ ನಡೆದಿದೆ.
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ನಿವಾಸಿ ಅಶೋಕ ರೆಡ್ಡಿ ಪಾಂಡುರಂಗ ರೆಡ್ಡಿ ಪಿಚಾರೆ ಪ್ಯಾಸೆಂಜರ್ ಅಟೊ ಓಡಿಸಿ ಜೀವನ ಸಾಗಿಸುತ್ತಾರೆ.
ಏಪ್ರಿಲ್ 17ರಂದು ಪ್ರಯಾಣಿಕರನ್ನು ಬಸವಕಲ್ಯಾಣದಿಂದ ಕೌಡಿಯಾಳ ಗ್ರಾಮಕ್ಕೆ ಕರೆದೊಯ್ಯುವಾಗ ಅವರದೇ ಊರಿನ ಹಜರತ್ ಬೀ ಹನ್ನುಮಿಯ್ಯಾ ಎಂಬುವವರು ಕೂಡ ಆಟೋ ಹತ್ತಿದ್ದಾರೆ. ಸಾಲು ಮರದ ತಿಮ್ಮಕ್ಕ ಉದ್ಯಾನದ ಹತ್ತಿರ ಇಳಿದುಕೊಂಡಿದ್ದಾರೆ. ವಾಪಸ್ ಹೋಗುವಾಗ ಪುನಃ ಅದೇ ಆಟೊದಲ್ಲಿಯೇ ಬರುವುದಾಗಿ ತಿಳಿಸಿದ್ದಾರೆ. ಅದ್ರಂತೆ ಅಶೋಕ ರೆಡ್ಡಿ ಮಧ್ಯಾಹ್ನ 1ಕ್ಕೆ ಹಜರತ್ ಬೀ ಅವರನ್ನು ಆಟೊದಲ್ಲಿ ಹತ್ತಿಸಿಕೊಂಡು ಕರೆದೊಯ್ಯುವಾಗ ಐವರು ಮುಸ್ಲಿಂ ಯುವಕರು ಅಡ್ಡಗಟ್ಟಿ, ಯುವತಿ ಮತ್ತು ಆಟೋ ಚಾಲಕನನ್ನು ಮನಬಂದಂತೆ ಥಳಿಸಿ, ನಿಂದಿಸಿ, ಮತ್ತೊಮ್ಮೆ ಮುಸ್ಲಿಂ ಮಹಿಳೆಯರೊಂದಿಗೆ ತಿರುಗಾಡದಂತೆ ಜೀವ ಬೆದರಿಕೆ ಹಾಕಿದ್ದರು.
ದೂರಿನ ಆಧಾರದ ಮೇಲೆ ನೈತಿಕ ಪೆÇಲೀಸ್‍ಗಿರಿ ಪ್ರಕರಣದಲ್ಲಿ ಬೀದರ್?ನಲ್ಲಿ ಸೈಯದ್ ಬಿಲಾಲ್, ತೌಸಿಫ್ ಅಯೂಬ್ ಚಾವುಸ್ ಹಾಗೂ ಸೈಯದ್ ಇಬ್ರಾಹಿಂ ಎಂಬುವವರನ್ನು ಪೆÇಲೀಸರು ಬಂಧಿಸಿದ್ದು, ಖದೀರ್ ಖುರೇಶಿ ಹಾಗೂ ಮಗದೂಮ್ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.