ಉದ್ಯೋಗಿಗಳ ಅಮಾನತ್ತು ರೈತರು ಧರಣಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.13: ತಾಲ್ಲೂಕಿನ ಉಪ್ಪರಹೋಸಳ್ಳಿ ಗ್ರಾಮದ ಸಮೀಪದ ಬ್ರೈಟರ್ ಗ್ರೀನ್ ಯುನಿವರ್ಸಲ್ ಸೌರ ವಿದ್ಯುತ್ ಘಟಕದ ಉದ್ಯೋಗಿಗಳ ಅಮಾನತ್ತು ಖಂಡಿಸಿ ಗ್ರಾಮಸ್ಥರು ಕಳೆದ ಮೂರುದಿನಗಳಿಂದ ಧರಣಿ ಕುಳಿತಿರುವ ಘಟನೆ ನಡೆದಿದೆ.
ಬಿಜಿಯುಇ ಸೌರ ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುವ ಏಳು ಜನ ಉದ್ಯೋಗಿಗಳಲ್ಲಿ ಮೂವರನ್ನು ಅಮಾನತ್ತು ಗೊಳಿಸಿರುವುದನ್ನು ಖಂಡಿಸಿ ಉಳಿದ ಉದ್ಯೋಗಿಗಳು ಹಾಗೂ ಗ್ರಾಮಸ್ಥರು ಸೇರಿ ಕಂಪನಿ ವಿರುದ್ಧ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದು ಯಾವುದೇ ಮುಚ್ಚಳಕ್ಕೆ ಶರತ್ತುಗಳು ಅಮಾನತ್ತು ಹಿಂಪಡೆಯಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ರೈತ ಮೋರ್ಚ್ ಪ್ರಧಾನ ಕಾರ್ಯದರ್ಶಿ ಶರಣಬಸವನಗೌಡ ಮಾತನಾಡಿ ಉದ್ಯೋಗಿಗಳು ಕ್ಲೈಂಟ್(ಮಾಲೀಕರ ಪ್ರತಿನಿಧಿ) ಯೊಂದಿಗೆ ಮಾತನಾಡಿದ್ದಾರೆ ಎಂದು ಸುಖ ಸುಮ್ಮನೆ ಆರೋಪಿಸಿ ಮೂವರನ್ನು ಅಮಾನತು ಮಾಡಿರುತ್ತಾರೆ ಯಾವುದೇ ತಪ್ಪು ಮಾಡಿರದ ಉದ್ಯೋಗಿಗಳನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದರು, ನಮ್ಮದೇ  ಭೂಮಿಯನ್ನು ಪಡೆದು ನಮ್ಮ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜಿಯುಇ ಪ್ರತಿನಿಧಿ ಬಸವರಾಜ ಇವರಿಗೆ ಅಮಾನತ್ತು ಹಿಂಪಡೆದು ಕೆಲಸಕ್ಕೆ ಸೇರಿಸಿಕೋಳ್ಳುವಂತೆ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಉದ್ಯೋಗಿಗಳಾದ ಸೋಮನಗೌಡ, ಬಸವನಗೌಡ ಹಾಗೂ ತಿಮ್ಮನಗೌಡ ಮತ್ತು ರೈತ ಮುಖಂಡರಾದ ವೆಂಕಟೇಶ ಗೌಡ, ವೀರನಗೌಡ, ಶರಭನಗೌಡ, ವಿರುಪನಗೌಡ, ಮಲ್ಲಿಕಾರ್ಜುನ ಗೌಡ, ಗುರು ಬಸವನಗೌಡ, ರುದ್ರಗೌಡ, ಚೆನ್ನಪ್ಪ ಗೌಡ, ವೀರೇಶ ಗೌಡ ಇದ್ದರು.