ಪಿಂಜಾರ್ ಸಮಾಜದ ಏಳಿಗೆಗಾಗಿ ಶ್ರಮಿಸಿದ: ಹಿರೇಹಾಳ್ ಇಬ್ರಾಹಿಂ ಸಾಬ್
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.13: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಮಣಿಗೇರ್ ಮಸೀದಿ ಹತ್ತಿರ ಕರ್ನಾಟಕ ರಾಜ್ಯ ನದಾಫ್ /ಪಿಂಜಾರ್ ಸಂಘ, ಸಿರುಗುಪ್ಪ ಘಟಕ ಹಾಗೂ ಎಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಸಮಸ್ತ ನದಾಫ್ /ಪಿಂಜಾರ್ ಬಾಂಧವರಿಂದ ಕರ್ನಾಟಕ ರಾಜ್ಯ ನದಾಫ್ /ಪಿಂಜಾರ್ ಸಂಘ ವನ್ನು ಹುಟ್ಟು ಹಾಕಿ ಸಮುದಾಯದದಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಹ ದಿವಂಗತ ಹಿರೇಹಾಳ್ ಇಬ್ರಾಹಿಂ ಸಾಬ್ ರವರ 93ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಎನ್.ಖಾದರ್ ಭಾಷಾ, ತಾಲ್ಲೂಕು ಕಾರ್ಯದರ್ಶಿ ಎಂ. ಜೆ. ಖಾದರ್ ಭಾಷಾ ಹಾಗೂ ಎಲ್ಲಾ ತಾಲ್ಲೂಕು ಘಟಕದ ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.