ನವಗ್ರಹ ಹೋಮ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು,ಮೇ.13: ಸಮೀಪದ ಗಂಧದನಾಡು ಖಾನಾಪೂರ ತಾಲೂಕಿನ ಕಸಮಳಗಿಯ (ಕೇಸರಮಳಗಿ) ಶ್ರೀ 1008 ವರಸಿದ್ಧಿ ಪಾಶ್ರ್ವನಾಥ ತೀರ್ಥಂಕರರ ಬಸದಿಯಲ್ಲಿ ನವಗ್ರಹ ಹೋಮ ಮತ್ತು ವಿಧಾನ ಅದ್ಧೂರಿಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ವಿಧಾನ ಕುರಿತು ಮಾತನಾಡಿದರು. ಈ ವಿಧಾನದ ಆಚಾರ್ಯರಾಗಿ ಸುಯೋಗ ಉಪಾಧ್ಯೆ ಸ್ಥಾನಿಕ ಪಂಡಿತ ಚಂದನ ಉಪಾಧ್ಯೆ ಪೂಜೆ ನೇರವೇರಿಸಿದರು.
ರಾಜೇಂದ್ರ ಜಕ್ಕನ್ನವರ, ಅಭಯ ಅವಲಕ್ಕಿ, ನ್ಯಾಯವಾದಿ ರವಿರಾಜ ಪಾಟೀಲ, ಅಶೋಕ ಪಾಟೀಲ, ವೈಭವ ಬಡಾಳೆ, ಸನ್ಮತಿ ಕಸ್ತೂರಿ, ಪ್ರಮೋದ ಪಾಟೀಲ, ಅಭಿನಂದನ ಕೊಚೇರಿ, ಮಲ್ಲಪ್ಪ ಮಡೇದ, ಡಿ.ಡಿ.ಪಾಟೀಲ, ಪಾಟೀಸ್ ಬಡಸದ, ತವನಪ್ಪ ಕಡಬಿ, ಸಂತೋಷÀ ಪಾಟೀಲ, ಭರತೇಶ ಗೌಡರ, ಪತ್ರಕರ್ತ ಕಲ್ಲಪ್ಪ ಅಗಸಿಮನಿ, ದೇವು ಗೌಡರ ಸೇರಿದಂತೆ ಕಮೀಟಿಯವರು, ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮದ ಹಿರಿಯರು, ಯುವಕರು, ಜೈನ ಶ್ರಾವಕ-ಶ್ರಾವಕೀಯರು ಇನ್ನಿತರರು ಉಪಸ್ಥಿತರಿದ್ದರು.