ಧಾರಾಕಾರ ಮಳೆ: ಬೆಳೆ ಹಾನಿ

ಮುನವಳ್ಳಿ, ಮೇ 13: ಪಟ್ಟಣದಲ್ಲಿ ಶನಿವಾರ ಸಂಜೆ ಭಾರಿ ಗಾಳಿ, ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಿಂದಾಗಿ ಗಾಂಧಿನಗರದ ಹಳೆ ಗೌಟನ ಹೊಸ ಗೌಟನ, ರೇಣುಕಾ ಸಕ್ಕರೆ ಕಾರ್ಖಾನೆಯ ಮುಖ್ಯ ರಸ್ತೆ, ಕಟಕೋಳ ಮುಖ್ಯ ರಸ್ತೆ, ಬಜಾರದಲ್ಲಿ ಗಿಡ ಮರಗಳು, ವಿದ್ಯುತ್ ಕಂಬಗಳು ಕಾರ ಹಾಗೂ ಮನೆಗಳು ಜಖಂಗೊಂಡಿವೆ. ಪಂಚಲಿಂಗೇಶ್ವ ರೈತ ಸಂಪರ್ಕ ಕೇದ್ರದ ಗೊಡಾವನ ತಗಡುಗಳು ಹಾರಿಹೋಗಿ ಸುಮಾರು 250 ಟನ್ ಗೊಬ್ಬರ ನೀರುಪಾಲಾಗಿದೆ. ಮಳೆ ಗಾಳಿಯಿಂದ ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ರಸ್ತೆ ಮೇಲೆ ನೀರು ಬಂದ ಕಾರಣ ಜನರಿಗೆ ಸಂಚಾರಕ್ಕೆ ಅನಾನುಕೂಲ ಉಂಟಾಯಿತು. ಹೊಲಗಳಲ್ಲಿ ಪಪ್ಪಾಯಿ, ಬಾಳೆ, ಮೆಕ್ಕೆಜೋಳ, ಕಬ್ಬು ಸೇರಿ ಮತ್ತಿತರ ಬೆಳೆಗಳು ಹಾನಿಯಾಗಿದೆ. ಸ್ಥಳಗಳಿಗೆ ದಂಡಾಧಿಕಾರಿಗಳು, ಶಾಸಕರು ಬೇಟಿ ನೀಡಿ ಪರಿಸಿಲಿಸಿ ಸೂಕ್ತ ಪರಿಹಾರ ಕೊಡಿಸುವದಾಗಿ ತಿಳಿಸಿದರು.