ಸಿಡಿಲು ಬಡಿದು ಎತ್ತುಗಳ ಸಾವು
ಲಕ್ಷ್ಮೇಶ್ವರ, ಮೇ 13: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ನಡೆದಿದೆ.
ಗ್ರಾಮದ ರೈತ ಹನುಮಂತಪ್ಪ ಶಿವಪ್ಪ ಲಮಾಣಿ ಎಂಬುವವರಿಗೆ ಸೇರಿದ ಎತ್ತುಗಳಾಗಿವೆ. ಎರಡು ಎತ್ತುಗಳ ಕಿಮ್ಮತ್ತು 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.