ಹುಡಗಿ ಜಾತ್ರೆ ಯಲ್ಲಿ ಯಶಸ್ವೀಯಾಗಿ ಜರುಗಿದ ಪಶು ಪ್ರದರ್ಶನ
ಸಂಜೆವಾಣಿ ವಾರ್ತೆ
ಹುಮನಾಬಾದ್ :ಮೇ.13:ಜಾನುವಾರುಗಳ ಆರೋಗ್ಯದ ಕುರಿತು ಎಲ್ಲರೂ ಮುಂಜಾಗ್ರತೆ ವಹಿಸಿ, ಅವುಗಳ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ನರಸಪ್ಪ ದೇವಗೊಂಡ ಹೇಳಿದರು.
ತಾಲೂಕಿನ ಹುಗಡಿ ಗ್ರಾಮದ ಐತಿಹಾಸಿಕ ದಿಗಬಂದರ ಕರಿಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಹೊರ ವಲಯದ ವೆಂಕಮ್ಮ ದೇವಸ್ಥಾನದ ಆವರಣದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಜಾತ್ರಾ ವ್ಯವಸ್ಥಾಪನಾ ಮಂಡಳಿ ವತಿಯಿಂದ ಭಾನುವಾರ ನಡೆದ ಪಶು ಆರೋಗ್ಯ ಶಿಬಿರ ಹಾಗೂ ಪಶು ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರ್ಪಡಿಸುವ ಪಶು ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಶು ವೈದ್ಯಾಧಿಕಾರಿ ಡಾ. ಶಾಂತಕುಮಾರ ಸಿದ್ಧೇಶ್ವರ ಮಾತನಾಡಿ, ಜಾನುವಾರಗಳ ಸಾಕಾಣಿಕರಗಾಗಿ ಸರಕಾರ ನೀಡುತ್ತಿರುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಸಿಗುತ್ತಿದೆ. ಹಾಲು ಉತ್ಪಾದನೆಗೆ ಮುಂದಾಗಬೇಕು ಎಂದು ತಿಳಿಸಿದರು.
ಪಶು ಪ್ರದರ್ಶನ ಹಾಗೂ ಆರೋಗ್ಯ ಶಿಬಿರದಲ್ಲಿ ವಿವಿಧ ತಳಿಯ 160ಕ್ಕೂ ಹೆಚ್ಚು ಜಾನುವಾರುಗಳು ಬಂದಿದ್ದವು. ಆರೋಗ್ಯ ಶಿಬಿರದಲ್ಲಿ ಭಾಗಿಯಾದ ಜಾನುವಾರುಗಳಿಗೆ ಲವಣ ಮಿಶ್ರಣ, ಜಂತು ನಾಶಕ ವಿತರಿಸಲಾಯಿತು. ಪಶು ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ ಬಹುಮಾನ ಸೇರಿ ಎಲ್ಲರಿಗೂ ಸಮಧಾನಕರ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಅಂಬವ್ವ,ಸಹಾಯಕ ನಿರ್ದೇಶಕರಾದ ಡಾ ಗೋವಿಂದ, ಪ್ರಗತಿಪರ ರೈತರಾದ ಗುರುಲಿಂಗಪ್ಪಾ ಮೇಲದೊಡ್ಡಿ, ಡಾ ಶಾಂತವೀರ ಗೋಪ, ಡಾ ಗಣಾಧಿಶ್ವರ್ ಹಿರೇಮಠ,ಡಾ. ಪ್ರವೀಣಕುಮಾರ್,ಡಾ. ಶಶಿಧರ್, ಡಾ. ಯೋಗೇಂದ್ರ , ಡಾ ಸಂಜು ಪಾಟೀಲ್,ಡಾ ನೀಲಕಂಠ,ಡಾ ಶ್ರೀಕಾಂತ ಬಿರಾದಾರ,ಡಾ. ಸಂತೋಷ, ಡಾ ಪ್ರಥ್ವಿರಾಜ್,ಡಾ ವಿಠ್ಠಲ,ಡಾ ಸಂಗಮೇಶ,ಡಾ ಶ್ವೇತಾರಾಣಿ, ಡಾ. ಶಿಲ್ಪಾ, ಡಾ ಸುನೀಲ, ಸಿಬ್ಬಂದಿ ವರ್ಗದ ಶಿವಕುಮಾರ ಸಲಗಾರ,ಮನೋಹರ, ಜಮೀರಸಾಬ್ , ರವೀಂದ್ರಯ್ಯ, ವಿನೋದ್, ವೀರಶೆಟ್ಟಿ ಸೇರಿದಂತೆ ಪ್ರಮುಖರಾದ ಅನಿಲ್ ನಂದಿ,ವಿನಾಯಕ ರುದನೂರ್,ಶಿವು ಮಾಶೆಟ್ಟಿ,ನಾಗರಾಜ್, ರಾಜು ಮಹಾಜನ್ ,ಅಮರ, ಲಿಂಗರಾಜ್,ಗೌರಿಶಂಕರ ಪರ್ತಾಪುರೆ, ಹಣಮಂತ ಸಾತಾ, ವಿಶ್ವನಾಥ, ಶಶಿ ಮಾಶೆಟ್ಟಿ, ಸುನೀಲ್ ಸಿಂಧನಕೆರ, ಲಿಂಗರಾಜ, ಸೇರಿದಂತೆ ಹಲವರು ಹಾಜರಿದ್ದರು.