ಎಸ್ಸೆಸ್ಸೆಲಿಯಲ್ಲಿ ಶೇ. ೯೦ ರಷ್ಟು ಅಂಕ
ಬೆಂಗಳೂರು, ಮೇ.೧೩- ಈ ಬಾರಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿರಿಯ ಸಿನಿಮಾ ಛಾಯಾಗ್ರಹಕ ಆರ್.ಮನೋಹರ್ ಅವರ ಪುತ್ರಿ ಪೂಜಾ ಮನೋಹರ್ ಅವರು ಶೇ.೯೦ ರಷ್ಟು ಅಂಕ ಪಡೆದಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನ ಲಿಟಲ್ ಲಿಲ್ಲೀಸ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಪೂಜಾ ಮನೋಹರ್ ಅವರು ಸಂಸ್ಕೃತದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಜೊತೆಗೆ ಇಂಗ್ಲಿಷ್ ನಲ್ಲಿ ೯೨, ಕನ್ನಡದಲ್ಲಿ ೯೩ , ಗಣಿತದಲ್ಲಿ ೮೩, ವಿಜ್ಞಾನದಲ್ಲಿ ೮೦ ಮತ್ತು ಸಮಾಜ ವಿಜ್ಞಾನದಲ್ಲಿ ೮೪ ಅಂಕಗಳನ್ನು ಪಡೆದಿದ್ದಾರೆ ಒಟ್ಟಾರೆ ೬೨೫ ಅಂಕಗಳಿಗೆ ೫೫೭ ಅಂಕಗಳನ್ನು ಪಡೆದು ೯೦ರಷ್ಟು ಫಲಿತಾಂಶ ಪಡೆದಿದ್ದಾರೆ.
ಮಗಳ ಸಾಧನೆಗೆ ಹಿರಿಯ ಸಿನಿಮಾ ಛಾಯಾಗ್ರಹಕ ಆರ್ ಮನೋಹರ್ ಮತ್ತು ಅವರ ಪತ್ನಿ ಭಾನುಶ್ರೀ ಮನೋಹರ್ ವರ್ಷ ವ್ಯಕ್ತಪಡಿಸಿದ್ದಾರೆ.