ಸಿಡಿಲು ಬಡಿದು 4 ಮೇಕೆಗಳು ಸಾವು
ಬೀದರ್: ಮೇ.13:ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಿಡಿಲು ಬಡಿದು ನಾಲ್ಕು ಮೇಕೆಗಳು ಮೃತಪಟ್ಟಿವೆ.
ಇಸ್ಲಾಂಪುರ ತಾಂಡಾದ ಭೀಮ ಬನ್ಸಿ ಅವರು ಮೇಕೆ ಮೇಯಿಸಲು ಹೊಲಕ್ಕೆ ಹೋದಾಗ ಬಿರುಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಮೇಕೆಗಳು ಮೃತಪಟ್ಟಿವೆ.
ನಾಲ್ಕು ಆಡುಗಳ ಅಂದಾಜು ಮೌಲ್ಯ ಸುಮಾರು ?60 ಸಾವಿರ ಎಂದು ಮಾಲೀಕ ಭೀಮ ಬನ್ಸಿ ತಿಳಿಸಿದ್ದಾರೆ.
ಭೀಮ ಬನ್ಸಿ ಅವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಗ್ರಾಮದ ಸಂಗಮೇಶ ಕೌಟಗೆ ಒತ್ತಾಯಿಸಿದ್ದಾರೆ.