ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಬಂಧನ
ಬೀದರ್:ಮೇ.13: ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್ ಜಿಲ್ಲಾ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಔರಾದ್ ತಾಲ್ಲೂಕಿನ ಖೇರ್ಡಾ ಗ್ರಾಮದ ಕಾಶಪ್ಪ ಚನ್ನಪ್ಪ ದೇಶಮುಖ (47) ಬಂಧಿತ.
ಈತ ಖೇರ್ಡಾ ಗ್ರಾಮದ ಪಿಕೆಪಿಎಸ್ ಬ್ಯಾಂಕಿನ ಮುಖ್ಯ ಅಧಿಕಾರಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೆÇಲೀಸರು ಜಾಲ ಬೀಸಿ ಶನಿವಾರ (ಮೇ 11) ಬಂಧಿಸಿದ್ದಾರೆ.
ಟನೆ ಸಂಬಂಧ ಮೂವರು ಆರೋಪಿಗಳನ್ನು ಮೇ 5ರಂದು ನಗರದ ನೌಬಾದಿನ ಆಟೊ ನಗರ ಸಮೀಪ ಪೆÇಲೀಸರು ಬಂಧಿಸಿದ್ದರು. ಬಂಧಿತರಿಂದ ಕೆಎ 34, ಎನ್ 0103 ಸಂಖ್ಯೆಯ ಕಾರು, ಮಚ್ಚು, ಖಾರದ ಪುಡಿ ಹಾಗೂ ಮೊಬೈಲ್‍ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಈ ವೇಳೆ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ. ಈಗ ಒಂದು ವಾರದ ನಂತರ ಮುಖ್ಯ ಆರೋಪಿಯನ್ನು ಸಹ ಪೆÇಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದ ಸರ್ವೇ ನಂಬರ್ 163ರಲ್ಲಿ ಮೂರು ಎಕರೆ ಐದು ಗುಂಟೆ ಜಮೀನು ಕಾಶಪ್ಪ ಅವರಿಗೆ ಸೇರಿದೆ. ಸುಮಾರು ?20 ಲಕ್ಷ ಸಾಲ ಪಡೆದು ಅದನ್ನು ಬೇರೊಬ್ಬರ ಹೆಸರಲ್ಲಿ ಅಡವಿಟ್ಟಿದ್ದಾರೆ. ಅಡವಿಟ್ಟುಕೊಂಡ ವ್ಯಕ್ತಿಯಿಂದ ವಕೀಲ ಬಾಬಶೆಟ್ಟಿ ಚಂದ್ರಪ್ಪ ಕರ್ಸೆ ಖರೀದಿಸಿದ್ದರು. ಜಮೀನು ಖರೀದಿಸದಂತೆ ತಿಳಿಸಿದ್ದರೂ ಕರ್ಸೆ ಕಿವಿಗೊಟ್ಟಿರಲಿಲ್ಲ. ಇದರಿಂದಾಗಿ ಕರ್ಸೆ ಮೇಲೆ ಕಾಶಪ್ಪ ದೇಶಮುಖನಿಗೆ ಮನಃಸ್ತಾಪವಿತ್ತು. ಸ್ನೇಹಿತನೊಂದಿಗೆ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ?5 ಲಕ್ಷ ಸುಪಾರಿ ಕೊಟ್ಟು, ಮುಂಗಡವಾಗಿ ?85 ಸಾವಿರ ನೀಡಿದ್ದ’ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.