ವಿಶ್ವ ರತ್ನ ಡಾ, ಬಾಬಾಸಾಹೇಬ್ ಅಂಬೇಡ್ಕರ್ 133ನೇ ಜಯಂತಿ
ಇಂಡಿ :ಮೇ.13: ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಸತತ 3ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ .
ತಾಲೂಕಿನ ಅಗರಖೇಡ ಗ್ರಾಮದಲ್ಲಿ ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ವನ್ನು ಡಾ, ಬಿ ಆರ್ ಅಂಬೇಡ್ಕರ್ ಯುವಕ ಸಂಘ ಅಗರಖೇಡ ಅವರ ವತಿಯಿಂದ 3ದಿನಗಳ ಕಾಲ ಕಾರ್ಯಕ್ರಮ ಗಳಾದ ಚಿಕ್ಕ ಮಕ್ಕಳಿಂದ ಸೌಂಸ್ಕøತಿ ಕಾರ್ಯಕ್ರಮ, ಸುಪ್ರಸಿದ್ದ ಭಜನಾ ಕಾರ್ಯಕ್ರಮಗಳು ಹಾಗೂ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮ ಜರುಗಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗಳಾದ ಶ್ರೀ ಹಣಮಂತ ಖಂಡೇಕರ, ಶ್ರೀ ಸಂಜೀವಕುಮಾರ ಐಹೊಳೆ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶ್ರೀ ಕಾಂತು ಪವರ್ ಪೂಜೆ ಮಾಡುವ ಮುಖಾಂತರ ಮೆರವಣಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಸಹಾಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಪೆÇಲೀಸ್ ಇಲಾಖೆ ಹಾಗೂ ವಿವಿಧ ರಾಜಕೀಯ ಮುಖಂಡರು ಗಳು ಕಾರ್ಯಕ್ರಮ ಉದ್ದಕ್ಕೂ ಬರುವ ಮುಖಾಂತರ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಮಾಂತೇಶ ಮೇಲಿನಮನಿ, ಉಪಾಧ್ಯಕ್ಷ ಗೌತಮ್ ಬನಸೋಡೆ, ಕಾರ್ಯದರ್ಶಿ ಮಿಥುನ್ ಬನಸೋಡೆ, ಗ್ರಾಮ ಪಂ ಸದಸ್ಯ ಸುಖದೇವ ಮೇಲಿನಕೇರಿ, ಗ್ರಾಮ ಪಂ ಮಾಜಿ ಅಧ್ಯಕ್ಷ ಗೋಪಾಲ ಡೊಳ್ಳೆ, ಸಂಜೆವಾಣಿ ವರದಿಗಾರ ಜೈಭೀಮ ಸಿಂಗೆ, ಗ್ರಾಮ ಪಂ ಮಾಜಿ ಸದಸ್ಯ ಸುನಿಲ ಗಾಯಕವಾಡ, ನ್ಯಾಯವಾದಿ ರವಿ ಮೇಲಿನಕೇರಿ, ಸೈನಿಕ್ ಸಂತೋಷ ಸಿಂಗೆ, ಅಪ್ಪಾಶ ಹರಿಜನ, ದಸರತ ಮೇಲಿನಕೇರಿ, ಗ್ರಾಮ ಪಂ ಮಾಜಿ ಸದಸ್ಯ ಶಂಕರ ಮೇಲಿನಕೇರಿ, ಬಾಬು ಸಿಂಗೆ, ರವಿ ಮಲಿನಕೇರಿ, ರವಿ ಡೊಳ್ಳೆ, ಪ್ರಕಾಶ್ ಸಿಂಗೆ, ಪುಂಡಲೀಕ. ಮೇಲಿನಕೇರಿ, ಶಂಕರ್ ಹಳಗುಣಕಿ, ಸೇರಿದಂತೆ ಹಲವಾರು ಜನರು ಭಾಗಿಯಾಗಿದರು.