ರೇಣುಕಾ ಯಲ್ಲಮ್ಮ ದೇವಿಯ ರಥೋತ್ಸವ
ಆನೇಕಲ್.ಮೇ.೧೩- ಹೊಸರೋಡ್‌ನ ಚೆನ್ನಕೇಶವನಗರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ರೇಣುಕಾ ಯಲ್ಲಮ್ಮ ಸೇವಾ ಸಮಿತಿ ವತಿಯಿಂದ ಶ್ರೀ ರೇಣುಕಾ ಯಲ್ಲಮ್ಮ ರಥೋತ್ಸವವನ್ನು ಸಹ ಆಯೋಜಿಸಲಾಗಿತ್ತು.
ಇನ್ನು ರಥಕ್ಕೆ ಬಿಬಿಎಂಪಿ ಮಾಜಿ ಸದಸ್ಯರಾದ ಕೇಬಲ್ ಶ್ರೀನಿವಾಸ್ ರವರು ಚಾಲನೆ ನೀಡಿ ಶುಭ ಹಾರೈಸಿದರು.
ಇನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ರಥವು ಬರುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಭವ್ಯ ಸ್ವಾಗತ ಕೋರಿದರು. ಹಾಗೆಯೇ ತಮಟೆ ವಾದ್ಯಕ್ಕೆ ಮಹಿಳೆಯರು,ಯುವಕರು,ಮಕ್ಕಳು ನೃತ್ಯ ಮಾಡಿದ ದೃಶ್ಯ ಕಂಡು ಬಂತು.
ಕಾರ್ಯಕ್ರಮದಲ್ಲಿ ಪರಪ್ಪನ ಅಗ್ರಹಾರ ಎಲ್ಲಮ್ಮ ದೇವಾಲಯದ ದರ್ಮದರ್ಶಿಗಳಾದ ಶ್ರೀ ವೇಣುಗೋಪಾಲ ರೆಡ್ಡಿ, ಜಿಲ್ಲಾಪಂಚಾಯತಿ ಮಾಜಿ ಸದಸ್ಯರಾದ ಹೆಚ್.ವಿ.ಶ್ರೀನಿವಾಸ್,
ಚನ್ನಕೇಶವ ನಗರ ಎಲ್ಲಮ್ಮ ದೇವಾಲಯದ ದರ್ಮದರ್ಶಿಗಳಾದ ಎಸ್.ಬಿ.ರಾಮಯ್ಯ ರವರು, ಮತ್ತು ರಥೋತ್ಸವದ ಆಯೋಜಕರಾದ ಆರ್.ಸುಬ್ರಮಣಿ (ಸುಬ್ಬು), ಎನ್, ವೆಂಕಟೇಶ್. ರಘು. ಗೋವಿಂದರಾಜ್. ಎಸ್.ಆರ್.ಶ್ರೀನಿವಾಸ್, ಕಾರ್ತಿಕ್, ಶ್ಯಾಮ್, ಮಂಜುನಾಥ್, ಜಗದೀಶ್, ಮುನಿಸ್ವಾಮಿ, ಯಲ್ಲಪ್ಪ, ರೋಹಿತ್ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.