ಆದಿಗುರು ಶಂಕರಾಚಾರ್ಯ ಜಯಂತಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.13:- ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಗ್ರಹಾರದಲ್ಲಿರುವ ಅಭಿನವ ಶಂಕರಾಲಯ ಶಂಕರ ಮಠದಲ್ಲಿ ಶ್ರೀ ಶಂಕರ ಸನ್ನಿಧಿಯಲ್ಲಿ ರುದ್ರಾಭಿಷೇಕ, ವೇದಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ನವಗ್ರಹ ಜಪ ಇತ್ಯಾದಿಗಳು ನಂತರ ಭಕ್ತಾದಿಗಳಿಗೆ ಪ್ರಸಾದ ಸಂಜೆ ಶಂಕರ ಮಠದಿಂದ ಮಠದಿಂದ ಭವ್ಯ ಮೆರವಣಿಗೆ ಮೂಲಕ ಶಂಕರಾಚಾರ್ಯರ ಶಂಕರ ಮಠದ ಮುಖ್ಯ ರಸ್ತೆಯಿಂದ ಉತ್ತರಾದಿ ಮಠದ ರಸ್ತೆ ಮಾರ್ಗವಾಗಿ ನಾದಸ್ವರ ಹಾಗೂ ಭಜನೆ ಮೂಲಕ ಭವ್ಯ ಮೆರವಣಿಗೆ ಸಾಗಿತು ಶಾಸಕರಾದ ಟಿ ಎಸ್ ಶ್ರೀವತ್ಸ.
ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ಶಂಕರ್ ಮಠದ ವ್ಯವಸ್ಥಾಪಕರಾದ ಶೇಷಾದ್ರಿ ಭಟ್, ಸಪ್ತ ಮಾತ್ರಿಕ ದೇವಸ್ಥಾನದ ಧರ್ಮ ಅಧಿಕಾರಿ ಭಾಸ್ಕರ್, ಮೈಸೂರ್ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮಾಜಿನಗರ ಪಾಲಿಕಾ ಸದಸ್ಯರಾದ ಬಿ ವಿ ಮಂಜುನಾಥ್, ಅಚ್ಯುತ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಕೆ ಎಂ ನಿಶಾಂತ್, ಹೊಯ್ಸಳ ಕರ್ನಾಟಕದ ನಿರ್ದೇಶಕ ರಂಗನಾಥ್, ಪ್ರಶಾಂತ್, ಎಂ ಆರ್ ಬಾಲಕೃಷ್ಣ, ಜ್ಯೋತಿ, ಶ್ರೀಕಾಂತ್ ಕಶ್ಯಪ್, ಮೀನಾ, ಹರೀಶ್ , ಸುಚಿಂದ್ರ, ಸುಧೀಂದ್ರ,ಹಾಗೂ ಇನ್ನಿತರರು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು,