ಬಿಜೆಪಿ ಕಚೇರಿಯಲ್ಲಿ ತತ್ವಜ್ಞಾನಿ ದಿನಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.13:- ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ಆಚರಿಸಲಾಯಿತು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಟಿ.ಎಸ್ .ಶ್ರೀವತ್ಸ ಶಂಕರಾಚಾರ್ಯರು 1236 ವರ್ಷಗಳ ಹಿಂದೆಯೇ ಜನಿಸಿ ಹಿಂದೂ ಧರ್ಮದ ಉಳಿವಿಗಾಗಿ ಭಾರತವನ್ನ ಕಾಲ್ನಡಿಗೆಯಲ್ಲಿ 3 ಬಾರಿ ಪರ್ಯಟನೆ ಮಾಡಿ 4ಪೀಠಗಳನ್ನ ಸ್ಥಾಪಿಸಿದ್ದಾರೆ. ಹಿಂದೂ ಧರ್ಮವನ್ನ ಪುನರತ್ಥಾನಗೊಳಿಸಿದ ಶಂಕರರು ಸಹಸ್ರಾಮಾನದ ಹಿಂದೆಯೇ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜರು ಇಬ್ಬರು ಮಹನೀಯರ ಧ್ಯೇಯ ಸಿದ್ದಾಂತಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದೆ ,ಧಾರ್ಮಿಕ ಆಧ್ಯಾತ್ಮಿಕವಲ್ಲದೇ ಸಾಂಸ್ಕೃತಿಕ ವೈಜ್ಞಾನಿಕವಾಗಿಯೂ ಹಲವಾರು ಕೊಡುಗೆಗಳನ್ನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿರವರು ಶಂಕರ ಜಯಂತಿಯನ್ನ ವಿಶ್ವ ತತ್ವಜ್ಞಾನಿ ದಿನಾಚರಣೆ ಎಂದು ಘೋಷಿಸಿದರೆಂದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ ಶಂಕರಾಚಾರ್ಯರು ಕೇವಲ 32ವರ್ಷಗಳಿದ್ದರೂ ಸಹ ಅವರು ಹಿಂದೂ ಧರ್ಮವನ್ನು ದೇಶದೆಲ್ಲಡೆ ಪ್ರಜ್ವಲಿಸಿದರು. ಇಂದಿಗೂ ಸಹ ಶಂಕರ ತತ್ವಗಳು ಯುವ ಮನಸ್ಸುಗಳನ್ನ ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದರು
ಮೈಲಾಕ್ ಮಾಜಿ ಅಧ್ಯಕ್ಷ ಎನ್.ವಿ.ಪನೀಶ್, ಮಾಜಿ ಮಹಾಪೌರ ಶಿವಕುಮಾರ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ಕೇಬಲ್ ಮಹೇಶ್, ಗೋಪಾಲ್ ರಾವ್, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಬಿ.ವಿ.ಮಂಜುನಾಥ ಚಾಮುಂಡೇಶ್ವರಿ ಕ್ಷೇತ್ರದ ನಗರ ಅಧ್ಯಕ್ಷ ರಾಕೇಶ್ ಭಟ್, ಚಾಮುಂಡೇಶ್ವರಿ ಕ್ಷೇತ್ರದ ಮಂಡಲ ಅಧ್ಯಕ್ಷ ಪೈ.ಟಿ.ರವಿ, ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ, ಎಸ್ಸಿ ಮೊರ್ಚಾ ಅಧ್ಯಕ್ಷ ಶೈಲೇಂದ್ರ, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಜಗದೀಶ್, ಎಂ ಆರ್ ಬಾಲಕೃಷ್ಣ, ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು