ಶ್ರೀರಂಗಪಟ್ಟಣದಲ್ಲಿ ಧಾರಾಕಾರ ಮಳೆ,ಮನೆಗಳಿಗೆ ನುಗ್ಗಿದ ನೀರು
ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ.ಮೇ.13:- ತಾಲೂಕಿನಾದ್ಯಂತ ಶುಕ್ರವಾರ ಸುರಿದ ಧಾರಾಕಾರದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಮನೆ ಕಾಂಪೌಂಡ್‍ಗಳು ಕುಸಿತಗೊಂಡು, ಗಾಳಿ ಮಳೆಗೆ ರಸ್ತೆ ಬದಿ ಮರಗಳು ನೆಲಕ್ಕುರುಳಿವೆ.
ತಾಲೂಕಿನ ಹುಲಿಕೆರೆ ಗ್ರಾಮದ ಕಾಲೋನಿಯಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮನೆಯ ಪ್ರಿಡ್ಜ್ ವಾಷಿಂಗ್ ಮಿಷನ್, ಪೀಠೋ
ಪಕರಣ ಸೇರಿದಂತೆ ಇತರ ವಸ್ತುಗಳು ಕೆಟ್ಟು ಹಾನಿಯಾಗಿದ್ದು, ಧಾರಾಕಾರ ಮಳೆ ಹಿನ್ನಲೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರಿನಿಂದ ಪಾತ್ರೆಗಳು ನೀರಲ್ಲಿ ತೇಲಾಡಿದ್ದು, ಮನೆಯಲ್ಲಿದ್ದ ದವಸ ಧಾನ್ಯಗಳು ಕೂಡ ನೀರಿಗೆ ಆಹುತಿಯಾಗಿವೆ.
ನೀರಿನಲ್ಲಿ ತೇಲಾಡಿದ ಪಾತ್ರೆ ರಾತ್ರಿ ಇಡಿ ಮಳೆ ನೀರು ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ನಿವಾಸಿಗಳ ಪರದಾಟ ಹೇಳ ತೀರದಾಗಿತ್ತು.ಇಡೀ ರಾತ್ರಿ ನಿದ್ರೆ ಮಾಡದೆ ನಿವಾಸಿಗಳ ಗ್ರಾಪಂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.
ಅವೈಜ್ಞಾನಿಕ ಚರಂಡಿ: ಹುಲಿಕೆರೆ ಗ್ರಾಮದ ಜುವಾರಿ ಗಾರ್ಡನ್ ಪಕ್ಕದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ಚರಂಡಿ ನಿರ್ಮಾಣದ ವ್ಯವಸ್ಥೆಯಿಂದ ಗುಂಡಿ ನೀರು ಹೋರ ಹೋಗದೆ ತಗ್ಗು ಪ್ರದೇಶದ 10 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜುವಾರಿ ಗಾರ್ಡನ್ ನ ಕಾಂಪೌಂಡ್ ಕುಸಿದು ಬಿದ್ದು ಹಲವು ಮನೆಗಳಿಗೆ ಜಖಂ ಗೊಳ್ಳುವಂತಾಗಿದೆ. ಅಕ್ರಮವಾಗಿ ನಿರ್ಮಾಣ ಮಾಡಿರುವ ಜುವಾರಿ ಗಾರ್ಡನ್ ವಿರುದ್ದ ನಿವಾಸಿಗಳ ಮನೆಗಳಿಗೆ ಹಾನಿಯಾದರೂ ತಲೆಕೆಡಿಸಿಕೊಂಳ್ಳದ ಜುವಾರಿ ಗಾರ್ಡನ್ ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿ,ಸ್ಥಳೀಯ ನಿವಾಸಿಗಳಿಗೆ ತೊಂದರೆ ನೀಡುತ್ತಿರುವ ಅವರ ವಿರುದ್ದ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಸ್ಥಳೀಯ ನಿವಾಸಿಗಳ ಕರೆಗೆ ಓಗೊಟ್ಟು ಘಟನಾ ಸ್ಥಳಕ್ಕೆ ಹುಲಿಕೆರೆ ಗ್ರಾಪಂ ಪಿಡಿಒ, ಕಂದಾಯ ಅಧಿಕಾರಿಗಳು ಸ್ಥಳಿಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ,ತಹಶೀಲ್ದಾರ್ ಅವರಿಗೂ ದೂರವಾಣಿ ಕರೆ ಮಾಡಿ ಇಲ್ಲಿನ ಅವ್ಯವಸ್ಥೆ ಕುರಿತಾಗಿ ಮಾಹಿತಿ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳು ಹಾಗೂ ಮಹಿಳೆಯರು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟು ಮನೆಗೆ ನುಗ್ಗಿದ ನೀರಿನಿಂದ ಹಾಳಾದ ದವಸ ದಾನ್ಯ , ಮನೆ ಕಾಂಪೌಂಡ್ ನ ಮಾಹಿತಿಗಳ ಹೇಳಿಕೊಂಡು,ಗ್ರಾಮದಲ್ಲಿ ಈ ಸಮಸ್ಯೆಯ ಶಾಶ್ವತಕ್ಕೆ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿ,ಮಳೆಯಿಂದ ನಷ್ಟಕ್ಕೆ ಪರಿಹಾರ ನೀಡಬೇಕು ಜೊತೆಗೆ ತತಕ್ಷಣ ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ರಾಮು ಒತ್ತಾಯ ಮಾಡಿದರು.
ಗ್ರಾಪಂ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಚರ್ಚೆ ಮಾಡಿದ ನಂತರ ತಹಶೀಲ್ದಾರ್ ಆದೇಶದ ಮೇರೆಗೆ ,ಸ್ಥಳೀಯ ಪೆÇಲೀಸ್ ಠಾಣೆ, ನಗರಾಭಿವೃದ್ದಿ ಇಲಾಖೆ ,ನೀರಾವರಿ ಇಲಾಖೆ ಹಾಗೂ ಜುವಾರಿ ಗಾರ್ಡ್‍ನ್ ಸಿಟಿಯ ವ್ಯವಸ್ಥಾಪಕರಿಗೆ ನೋಟೀಸ್ ಕಳುಹಿಸಿದ್ದು, ಶೀಘ್ರ ತುರ್ತು ಕಾಮಗಾರಿ ನಡೆಸಲು ತಾಲೂಕು ಆಡಳಿತದಿಂದ ಪಂಚಾಯ್ತಿಗೆ ಸೂಚನೆ ನೀಡಲಾಗಿದೆ.