ಸತ್ಯತೆ ಇದ್ದರೆ ಮಾತ್ರ ಸಕರಾತ್ಮಕತೆ ನಮ್ಮದಾಗುತ್ತದೆ- ರಾಜಯೋಗಿನಿ ಪ್ರಭಾಮಣೀಜೀ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.13- ಜೀವನ ಮೌಲ್ಯಗಳು ಅಂತರಂಗದ ಖಜಾನೆಯಾಗಿದೆ, ಸತ್ಯತೆ ಇದ್ದರೆ ಮಾತ್ರ ಸಕರಾತ್ಮಕತೆ ನಮ್ಮದಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣೀಜೀ ಅಭಿಪ್ರಾಯ ಪಟ್ಟರು.
ಅವರು ನಂಜನಗೂಡು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಚಾಮರಾಜನಗರ ಜಿಲ್ಲಾ ರಾಜಯೋಗ ವಿದ್ಯಾರ್ಥಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದಅವರು, ರಾಜಯೋಗ ಒಂದು ಸಕರಾತ್ಮಕ ಚಿಂತನೆಯ ಕಲೆಯಾಗಿದ್ದು ಈ ಶಿಕ್ಷಣವನ್ನು ಈಶ್ವರೀಯ ವಿಶ್ವ ವಿದ್ಯಾಲಯವು ಮಾನವ ಕಲ್ಯಾಣಕ್ಕಾಗಿ ಉಚಿತವಾಗಿ ಕಲಿಸಲಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕøತರಾದ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರೀಜೀ ಮಾತನಾಡಿ ರಾಜಯೋಗಿ ವಿದ್ಯಾರ್ಥಿ ಜೀವನವು ಸುವರ್ಣಮಯ ಜೀವನವಾಗಿದ್ದು, ಆಧ್ಯಾತ್ಮಿಕತೆಯ ಪಾಠವು ಆತ್ಮೋನ್ನತಿಗೆ ಹೆದ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಮಾಜದ ರಾಜಯೋಗಿಣಿ ರಮಾಜೀ, ಉಮಾ, ವೀಣಾ, ಶಾಂಭವಿ, ಕಲ್ಪನಾ, ಬಿಂದು, ಪದ್ಮ ಸುಂದರಿ, ಸಂತೋಷ, ಸ್ವಾಮಿ, ಇಂದುಮತಿ ಓಂ ಶಾಂತಿ ನ್ಯೂಸ್ ಸರ್ವಿಸ್‍ನ ಬಿಕೆ ಆರಾಧ್ಯ ಹಾಜರಿದ್ದರು