ಮಕ್ಕಳು ಪುಸ್ತಕ ರಚನೆ ಮಾಡುವುದು ಶ್ಲಾಘನೀಯ
ಸಂಜೆವಾಣಿ ವಾರ್ತೆ
ಪಾಂಡವಪುರ.ಮೇ.13:- ಓದುವ ದಿನಗಳಲ್ಲಿ ಮಕ್ಕಳು ಪುಸ್ತಕ ರಚನೆ ಮಾಡುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ?ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಸಲಹೆ ನೀಡಿದರು.
ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ವಿದ್ಯಾರ್ಥಿನಿ ಅಪೇಕ್ಷಕೋಡಾಲ ಅವರ ರಚಿತ ನಿಶ್ಯಬ್ಧ ಇರುಳು' ಕಾದಂಬರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಶಾಲೆಗಳಿಗೆ ಹೋಗುವಂತಹ ದಿನಗಳಲ್ಲಿ ಅವರು ಓದಿಕೊಳ್ಳುವುದೇ ಕಷ್ಟ, ಅಂತಹದರಲ್ಲಿ ವಿದ್ಯಾರ್ಥಿನಿ ಅಪೇಕ್ಷ ಅವರು ತಾವೇ ನಿಶ್ಯಬ್ಧ ಇರುಳು ಎಂಬ ಕಾದಂಬರಿ ರಚನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.ಪುಸ್ತಕ ಬರೆಯುವಂತಹ ವಿದ್ಯಾರ್ಥಿಗಳಿಗೆ ತಾಳ್ಮೆ ಹಾಗೂ ಸಮಯ ಪ್ರಜೆ ಇರಬೇಕು ಕುಮಾರಿ ಅಪೇಕ್ಷ ಅವರಿಗೆ ಎರಡು ಸಹ ಇರುವುದರಿಂದ ಕಾದಂಬರಿಯನ್ನು ಉತ್ತಮವಾಗಿ ಬರೆಯಲು ಸಾಧ್ಯವಾಗಿದೆ. ವಿದ್ಯಾರ್ಥಿ ಅಪೇಕ್ಷ ನಮ್ಮ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಎಂಬುವುದು ನಮ್ಮೆ ಹೆಮ್ಮೆಯ ವಿಚಾರವಾಗಿದೆ, ವಿದ್ಯಾರ್ಥಿಗಳ ದಿನಗಳಲ್ಲಿಯೇ ಸ್ವತಃ ಅವರೇ ಕಾದಂಬರಿ ರಚನೆ ಮಾಡಿರುವುದು ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದು ಬಣ್ಣಿಸಿದರು. ಚನ್ನಾಗಿ ಓದುವ,ಉತ್ತಮ ಪ್ರತಿಭೆ ಇರುವಂತಹ ಮಕ್ಕಳಿಗೆ ಪೆÇೀಷಕರು, ಶಿಕ್ಷಕರು ಹೆಚ್ಚಿನ ಸಹಾಯ ಸಹಕಾರ ಮಾಡಬೇಕು, ಇಲ್ಲವಾದರೆ ಆ ಪ್ರತಿಭಾವಂತ ಮಕ್ಕಳಲ್ಲಿ ಇರುವ ಪ್ರತಿಭೆ ಕಮರಿ ಹೋಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮವಾದ ಪರಿಸರವನ್ನು ರೂಪಿಸಿಕೊಡುವುದು ಪೆÇೀಷಕರ ಜವಬ್ದಾರಿಯಾಗಿದೆ, ಮಕ್ಕಳು ಇಚ್ಚೆಪಡುವ ಕ್ಷೇತ್ರಗಳಲ್ಲಿ ಅವರು ಸಾಧನೆ ಮಾಡಲು ಪೆÇೀಷಕರು ಸಹಕಾರ ಮಾಡಬೇಕೆ ಹೊರತು ಇದೇ ಕ್ಷೇತ್ರದಲ್ಲಿ ಹೋಗಬೇಕು ಎಂಬ ಒತ್ತಡ ಏರಬಾರದು ಎಂದು ಸಲಹೆ ನೀಡಿದರು. ಸಾಹಿತಿ ಡಾ.ಮೀರಾಶಿವಲಿಂಗಯ್ಯ ಮಾತನಾಡಿ,ಪುಸ್ತಕಗಳು ಓದುಗರಿಗೆ ಸೂಕ್ಷ್ಮ ಸಂವೇದನೆಯನ್ನು ಭೇಟಿಮಾಡಿಸುವ ಕೆಲಸ ಮಾಡುತ್ತವೆ.ವರ್ತಮಾನದ ಘಟನೆಗಳು, ಓದುಗಳ ಹೃದಯದಲ್ಲಿ ಭಾವನಾತ್ಮಕ ಸ್ಥಂಭಗಳ ಅಲೆಗಳನ್ನು ಹೆಚ್ಚಿಸಲಿವೆ ಎಂದರು. ಕುಮಾರಿ ಅಪೇಕ್ಷ ಅವರು ಭಯೋತ್ಪಾದನೆಯ ಕುರಿತು ತುಂಬಾ ಚನ್ನಾಗಿ ಕಾದಂಬರಿ ರಚನೆ ಮಾಡಿದ್ದಾರೆ.ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಭಯೋತ್ಪಾದನ ಘಟನೆಗಳ ಕುರಿತು ವಿವರವಾಗಿ ಕತಾಸಂಕಲವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಎಂಬ ಗೀಳಿಗೆ ಒಳಗಾಗಿ ಮಕ್ಕಳ ಮನಸ್ಸಿನ ಮೇಲೆ ಭೀಕರವಾದ ಪರಿಣಾಮ ಬೀರುತ್ತಿವೆ,ಮನಸ್ಸಿನ ಅಂತಃಕರಣದಲ್ಲಿ ಮನಷ್ಯತ್ವವನ್ನು ಕಡಿಮೆ ಮಾಡುತ್ತಿವೆ ಎಂದು ವಿಷಾಧವ್ಯಕ್ತಪಡಿಸಿದರು. ಇತಿಹಾಸ ಚಿಂತಕ ಧರ್ಮೇಂದ್ರಕುಮಾರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸಿ ಎಲ್ಲಾ ಹೆಣ್ಣುಮಕ್ಕಳು ಶಿಕ್ಷಣ ಕಲಿಯುವಂತೆ ಮಾಡಿದ ಪರಿಣಾಮವಾಗಿ ನಾವೆಲ್ಲರು ಶಿಕ್ಷಣವಂತರಾಗಲು ಸಹಕಾರಿಯಾಯಿತು, ಅಪೇಕ್ಷ ಎಂಬಂತಹ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಕಾದಂಬರಿಯನ್ನು ರಚಿಸಲು ಸಹಕಾರಿಯಾಯಿತು ಎಂದು ಹೇಳಿದರು. ಎರಡು ಸಾವಿರ ವರ್ಷದ ಹಿಂದೆ ಸ್ತ್ರೀ ಪ್ರಧಾನ ಸಮಾಜ ನಮ್ಮಲ್ಲಿತ್ತು, ಸಾತವಾಹನರ ಕಾಲದಲ್ಲಿ ಆಗಿನ ರಾಜಮಹಾರಾಜರು ತಮ್ಮ ತಾಯಂದಿರ ಹೆಸರುಗಳನ್ನು ತಮ್ಮ ಹೆಸರಿನೊಡನೆ ಇರಿಸಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳಿಗೆ ಪ್ರಧಾನವಾದ ಸ್ಥಾನಮಾನಗಳು ನೀಡಿದ್ದರು. ತದನಂತರದ ಅದು ಕಡಿಮೆಯಾಯಿತು. ಮತ್ತೆ ಸ್ತ್ರೀ ಸಾಮಾನ್ಯರಿಗೆ ಸ್ಥಾನಮಾನಗಳು, ಶಿಕ್ಷಣಗಳು ದೊರೆತಿದ್ದು ಮೈಸೂರು ಅರಸರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಅವರ ಆಳ್ವಿಕ ಕಾಲದಲ್ಲಿ ಎಂದು ಬಣ್ಣಿಸಿದರು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ,ಕನ್ನಡ ಸಹಾಯಕ ಪ್ರಾದ್ಯಾಪಕಿ ಶಿಲ್ಪಶ್ರೀ ಮಾತನಾಡಿದರು. ಇದೇವೇಳೆ ವಿದ್ಯಾರ್ಥಿನಿ ಅಪೇಕ್ಷಕೋಡಾಲ ಅವರ ರಚಿತನಿಶ್ಯಬ್ಧ ಇರುಳು’ ಕಾದಂಬರಿ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಬಿಆರ್‍ಸಿ ಪ್ರಕಾಶ್, ಸಾಹಿತಿ ಚಂದ್ರಶೇಖರಯ್ಯ, ಹುಸ್ಕೂರುಕೃಷ್ಣೇಗೌಡ, ಕಸಾಪ ಅಧ್ಯಕ್ಷ ಪ್ರಕಾಶ್‍ಮೇನಾಗರ, ಅಪೇಕ್ಷ, ನಾಗಲಿಂಗೇಗೌಡ ಸೇರಿದಂತೆ ಹಲವರು ಹಾಜರಿದ್ದರು.