ಶೇ.100ರಷ್ಟು ಫಲಿತಾಂಶ
ಗುಳೇದಗುಡ್ಡ,ಮೇ.13: ಪಟ್ಟಣದ ಮಡಿವಾಳಪ್ಪ ಹುಚ್ಚಪ್ಪ ಆಡಿನ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ವೀಣಾ ದೇವಾಂಗಮಠ 596 (ಶೇ. 95.36), ಅಂಬಿಕಾ ಗಡೇದ 596 (ಶೇ. 95.36), ವಿರೇಶ ಬ್ಯಾಲಾಳ 596 (ಶೇ.95.36) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಯ್ಯಬಾ ಮುಧೋಳ 584 (ಶೇ.93.44) ಅಂಕಗಳೊಂದಿಗೆ ದ್ವಿತೀಯ, ವಿದ್ಯಾ ಕಲ್ಲಕುಟಕರ 581 (ಶೇ.92.96) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಅತ್ಯುನ್ನತ ದರ್ಜೇಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 22 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಅಧ್ಯಕ್ಷ ಘನಶ್ಯಾಮದಾಸ ರಾಠಿ, ಮುಖ್ಯೋಪಾದ್ಯಾಯ ಎನ್.ವಿ. ದೊಡಮನಿ, ಪಿ.ಆರ್. ಬಂತಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.