ಜ್ಞಾನಚೈತ್ರ ಶಾಲೆಗೆ ಅತ್ಯುತ್ತಮ ಫಲಿತಾಂಶ
ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಮೇ.12 :-  ತಾಲೂಕಿನ  ಗುಂಡಿನಹೊಳೆಯ ಜ್ಞಾನ ಮಂಟಪ ಎಜುಕೇಷನ್ ಟ್ರಸ್ಟ್‌ನ ಜ್ಞಾನ ಚೈತ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.95ರಷ್ಟು ಫಲಿತಾಂಶ ಬಂದಿದೆ.
ಶಾಲೆಯಲ್ಲಿ 28 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿ ಜಿ.ಎಸ್‌. 625ಕ್ಕೆ ಜಿ ಎಸ್ ಜೀವನ್  611 (8.97.76)  ಪಡೆಯುವ ಮೂಲಕ ತಾಲೂಕಿನಲ್ಲೇ ಮೂರನೇ ಟಾಪರ್‌ಆಗಿದ್ದಾರೆ. ಎಚ್. ಎಸ್.ಬಸವಲಿಂಗಯ್ಯ 546 (ಶೇ.87.36), ಸೈಯದ್ ಆರಿಫ್ 531 (ಶೇ.84.96), ಸಿ.ವಿ. ಅಪೂರ್ವ ಮತ್ತು ಕೆ.ಬಿ. ತುಳಸಿ
 527 (84.37), ತೇಜಸ್ವಿನಿ 513 (ಶೇ.82.08) ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಜ್ಞಾನ ಮಂಟಪ ಎಜುಕೇಷನ್ ಟ್ರಸ್ಟ್ ಆಡಳಿತಾಧಿಕಾರಿ ವಾಣಿ ನಾಗರಾಜ್, ಜ್ಞಾನಚೈತ್ರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.