ಪೂಜ್ಯ ಜಯಶ್ರೀಮಾತಾ ದಂಡೋತಿ ಅವರಿಗೆ ಮದರ್ ತೇರಸಾ ವಿ‌.ವಿ.ಗೌರವ ಡಾಕ್ಟ್ರೇಟ್
ಚಿತ್ತಾಪುರ:ಮೇ.12: ಸತತ ೧೨ ಜ್ಯೋತಿರ್ಲಿಂಗಗಳಲ್ಲಿ‌ ತಪಸ್ಸು ಮಾಡಿದ ಮತ್ತು ಗುರು,ಲಿಂಗ ,ಜಂಗಮರಿಗೆ ಭಕ್ತಿಯಿಂದ ಕಾಣುವ ಭಕ್ತ ಸಮೂಹದ ಮಾತೆ ಜಯಶ್ರೀಮಾತೆ ಬಲಭೀಮೇಶ್ವರ ಆಶ್ರಮ ದಂಡೋತಿ ಇವರಿಗೆ ಮದರ್ ತೇರೆಸಾ ವಿಶ್ವವಿದ್ಯಾಲಯದಿಂದ ರವಿವಾರದಂದು ಬೆಂಗಳೂರಲ್ಲಿ ಗೌರವ ಡಾಕ್ಟ್ರೇಟ್ ಪದವಿ ಪ್ರದಾನ ಮಾಡಲಾಯಿತು.
ಪೂಜ್ಯರು ಬಾಲಯೋಗಿನಿಯಾಗಿ ಯಾವುದೇ ಆಡಂಬರಕೆ ಹೋಗದೇ ಸದಾ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ ಇವರ ಸೇವೆ ಗುರುತಿಸಿ ಮದರ್ ತೇರಸಾ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟ್ರೇಟ್ ಪದವಿ ಪಡೆಯುವಂತೆ ಆಹ್ವಾನಿಸಿತ್ತು , ಇಂದು ಬೆಂಗಳೂರಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತಾಜೀ ಅವರು ಭಾಗವಹಿಸಿ ಸದರಿ ಪದವಿ ಪಡೆದರು.
ಇವರಿಗೆ ಗೌರವ ಪದವಿ ನೀಡಿದ್ದಕ್ಕೆ ಭಕ್ತ ಸಮೂಹ ಹರ್ಷಿತಗೊಂಡಿದೆ.
ಸರಳತೆಯ ಸಕಾರಮೂರ್ತಿಯಾದ ಇವರ ಧಾರ್ಮಿಕ ಸೇವೆ ನಿಜವಾಗಿಯೂ ಮೆಚ್ಚುವಂತಹದ್ದಾಗಿದೆ.
ಸಾವಿರಾರು ವರುಷಗಳ ಹಿಂದಿನ ಶ್ರೀ ಬಲಭೀಮೇಶ್ವರ ದೇವಸ್ಥಾನವನ್ನು ತಮ್ಮ ತನು,ಮನಧನ ಮತ್ತು ತಮ್ಮ ತಪಸ್ಸು ಬಲದಿಂದಲೇ ಜೀರ್ಣೋದ್ದಾರ ಮಾಡಿದ ತ್ಯಾಗಿ ಹಾಗೂ ಮಹಾಪುಣ್ಯಾತ್ಮರಾದ ಇವರಿಗೆ ಈ ಪದವಿ ದೊರಕಿರುವುದು ಸ್ವಾಗತಕರ ಸಂಗತಿ ಎಂದು ಖ್ಯಾತ ನ್ಯಾಯವಾದಿ ಹಾಗೂ ಸಾವಿರ ಸನ್ಮಾನಗಳ ಸರದಾರ ಮಲ್ಲಿಕಾರ್ಜುನ ಭೃಂಗಿಮಠ ಹರ್ಷವ್ಯಕ್ತಪಡಿಸಿದ್ದಾರೆ.ಮಾತಾಜಿ ಅವರು ಕಾಯಕ ಯೋಗಿ ಪೂಜ್ಯ ಲಿಂಗೈಕ್ಯ ಗದಿಗಯ್ಯ ಮಹಾ ಸ್ವಾಮಿಗಳನ್ನು ಸದಾ ಗುರು ರೂಪದಲ್ಲಿ ನೆನಸುವ ಇವರು ಸದಾ ಪರೋಪಕಾರದ ಮಾತೆ ಎಂದು ಭೃಂಗಿಮಠ ಬಣ್ಣಿಸಿದ್ದಾರೆ.
ಇವರಿಗೆ ಪದವಿ ದೊರಕಿದ್ದಕ್ಕೆ ಖುಷಿಯಾದ ದೇಶದ ವಿವಿಧ ಭಾಗದ ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು.