ವಿಶ್ವ ಕಾರ್ಮಿಕ ದಿನಾಚರಣೆ
ಬೀದರ್:ಮೇ.12: ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ವತಿಯಿಂದ ನಡೆಯುತ್ತಿರುವ ಸ್ವಧಾರ ಗೃಹದಲ್ಲಿ ಇತ್ತಿಚೀಗೆ ವಿಶ್ವ ಕಾರ್ಮಿಕರ ದಿನ ಆಚರಿಸಲಾಯಿತು.
ಕಾರ್ಮಿಕರು ಈ ದೇಶದ ನಿಜವಾದ ಸಂಪತ್ತು. ಹಾಗಾಗಿ ಅವರ ರಕ್ಷಣೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಅವಶ್ಯಕವಾಗಿದೆ. ಅವರ ಹಕ್ಕುಗಳು ಅವರಿಗೆ ನಿಜವಾಗಿ ತಲುಪಬೇಕು. ಆದರೆ ಅದರ ದುರುಪಯೊಗ ಇಂದು ಸಾಕಷ್ಟಾಗುತ್ತಿದೆ ಎಂದರು.
ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಹಾಗೂ ಸಮಾನ ಕೂಲಿ ಸಿಗುವಂತೆ ನೋಡಿಕೊಳ್ಳುವುದು ಪ್ರತಿಯೊಂದು ಸರ್ಕಾರ ಹಾಗೂ ಸಂಘ, ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.
ಇದೇ ವೇಳೆ ಕಪಿಲಾ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.
ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಹಾಗೂ ಸ್ವಧಾರ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿದ್ದರು.