ಗಾಜಿಪುರ: 58 ಸಾವಿರ ರೂ.ಮೊತ್ತದ ಮದ್ಯ ಜಪ್ತಿ
ಕಲಬುರಗಿ,ಮೇ.12-ನಗರದ ಗಾಜಿಪುರ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ಮೂವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ಬಂಧಿಸಿ 58,839 ರೂ.ಮೊತ್ತದ ಮದ್ಯ ಜಪ್ತಿ ಮಾಡಿದ್ದಾರೆ.
ಗಾಜಿಪುರದ ನಿತೀಶ್ ಇಲಕಲ್ (23) ಎಂಬಾತನನ್ನು ಬಂಧಿಸಲಾಗಿದ್ದು, ಓಂ ನಗರದ ಪ್ರಕಾಶ ದೇಗಲಮಡಿ ಮತ್ತು ಗಾಜಿಪುರದ ಲಿಂಗರಾಜ ನಾಟಿಕರ್ ಎಂಬುವವರು ಪರಾರಿಯಾಗಿದ್ದಾರೆ. ಮೂವರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.