ನಂದೂರ ವೀರಭದ್ರೇಶ್ವರಪಲ್ಲಕ್ಕಿ ಮೆರವಣಿಗೆ ನಾಳೆ
ಕಲಬುರಗಿ.ಮೇ 12: ತಾಲೂಕಿನ ನಂದೂರ ( ಕೆ) ಗ್ರಾಮದಲ್ಲಿ ವೀರಭದ್ರೇಶ್ವರ 54 ನೇ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ( ಮೇ 13) ಬೆಳಿಗ್ಗೆ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.ಬೆಳಿಗ್ಗೆ 5 ಗಂಟೆಗೆ ಅಗ್ನಿ ಪ್ರವೇಶ ನಡೆಯಲಿದೆ.
ಇಂದು ರಾತ್ರಿ 8 ಗಂಟೆಗೆ ವೀರಭದ್ರೇಶ್ವರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ.ಶ್ರೀಕಂಠ ಶಿವಾಚಾರ್ಯರು ನಾಗಣಸೂರ ಅವರ ನೇತೃತ್ವದಲ್ಲಿ ,ಅರ್ಚಕರಾದ ವೇಮೂ ಮರುಳಸಿದ್ದಯ್ಯಸ್ವಾಮಿ ನಂದಿಕೋಲಮಠ ಅವರ ಸಮ್ಮುಖದಲ್ಲಿ ಸಕಲ ಕಾರ್ಯಕ್ರಮ ನಡೆಯಲಿವೆ.ಜಾತ್ರೆಯ ಅಂಗವಾಗಿ ಇಂದು(ಮೇ 12) ಮತ್ತು ನಾಳೆ
( ಮೇ 13) ರಾತ್ರಿ 10 ಗಂಟೆಗೆ ಗೆಲುವು ಸಾಧಿಸಿದ ಗರತಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಿದೆ.