ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ
ಹುಬ್ಬಳ್ಳಿ,ಮೇ.12: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂದು ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ಶಂಕರಾಚಾರ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಹರ ಅಪರ ತಹಶೀಲ್ದಾರರಾದ ಜಿ.ವಿ.ಪಾಟೀಲ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಸಂಗಮೇಶ ಬಂಗಾರಿಮಠ, ಸಮಾಜದ ಮುಖಂಡರಾದ ಲಕ್ಷ್ಮಣ್ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ, ಮನೋಹರ ಪಾರ್ವತಿ, ಶಂಕರ ಪಾಟೀಲ್, ಶಿವಪ್ರಕಾಶ್ ನಾಯಕ್, ಸಂಧ್ಯಾ ದೀಕ್ಷೀತ, ನಿತ್ಯಾನಂದ ದೇಸಾಯಿ, ಸಂಜೀವ ಜೋಶಿ, ಅಣ್ಣಪ್ಪ ಗುಡಿಹಾಳ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.