ಕವನ ಸಂಕಲನ ಬಿಡುಗಡೆ
ಧಾರವಾಡ,ಮೇ.12: ಕವನ ನಮ್ಮ ಬದುಕಿನ ಭಾವನೆಗಳ ಹಾಗೂ ನೋವು ನಲಿವುಗಳ ಸಾಧನವಾಗಿದೆಎಂದುಕರ್ನಾಟಕ ಸರಕಾರದ ಲೋಕೋಪಯೋಗಿಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಜಿ. ಸಿ. ತಲ್ಲೂರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಲೀಲಾತಾಯಿ ಶ್ರೀ ಜೀವಣ್ಣಗೌಡ ಪಾಟೀಲ ಕುಲಕರ್ಣಿದತ್ತಿ ನಿಮಿತ್ತ ಆಯೋಜಿಸಿದ್ದ ಸರೋಜಾಕುಲಕರ್ಣಿಅವರಆಳ’ ಕವನ ಸಂಕಲನ ಬಿಡುಗಡೆಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಮನುಷ್ಯನಜೀವನದಲ್ಲಿ ಸಂತೋಷ ಹಾಗೂ ನಲಿವು ಕ್ಷಣಕ್ಷಣಕ್ಕೂ ಬದಲಾವಣೆಆಗುತ್ತಿರುತ್ತವೆ. ಆದರೆ ನೋವು ಮಾತ್ರ ಶಾಶ್ವತವಾಗಿರುತ್ತದೆ.ಸರೋಜಾಕುಲಕರ್ಣಿಅವರುತಮ್ಮಜೀವನದಲ್ಲಿ ಅನುಭವಿಸಿದ ನೋವು ನಲಿವುಗಳನ್ನು ತಮ್ಮಕೃತಿ ಆಳ' ಕವನ ಸಂಕಲನದ ಮೂಲಕ ಓದುಗರಿಗೆತಮ್ಮ ನೈಜಜೀವನದರ್ಶನ ಮಾಡಿಸಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಸಾಹಿತಿ ಪ್ರೊ.ದುಷ್ಯಂತ ನಾಡಗೌಡ ಮಾತನಾಡಿ,ಆಳ’ ಕವನ ಸಂಕಲನ ಕೃತಿ ಪರಿಚಯಿಸಿ ಮಾತನಾಡಿ, ಇದೊಂದುಗಂಭೀರ ಕವನ ಸಂಕಲನ. ಸರೋಜಾಕುಲಕರ್ಣಿತಮ್ಮ ಬದುಕಿನ ಸಾಮಾಜಿಕ ಸನ್ನಿವೇಶಗಳನ್ನು ತಾವುಂಡ ನೋವು ನಲಿವುಗಳನ್ನು ಕವನದ ಮೂಲಕ ಮನೋಜ್ಞವಾಗಿ ಅಭಿವ್ಯಕ್ತಗೊಳಿಸಿದ್ದಾರೆ.ಈ ಕವನಗಳು ಓದುಗರ ಮನ ತಟ್ಟುವಂತೆ, ಮುಟ್ಟುವಂತೆ ಇವೆ. ಕಾವ್ಯಗಳು ಸಮಾಜದಲ್ಲಿ ಕಾಲಮಾನಕ್ಕನುಗುಣವಾಗಿ ಹುಟ್ಟುತ್ತವೆಎಂದು ಹೇಳಿದರು.
ಆಳ ಕೃತಿಯ ಲೇಖಕರಾದ ಸರೋಜಾಕುಲಕರ್ಣಿ ಹಾಗೂ ಹಿರಿಯ ಸಾಹಿತಿ ನಿವೃತ್ತಅಭಿಯಂತರ ನರಸಿಂಹÀ ಪರಾಂಜಪೆಅವರುತಮ್ಮ ಸಾಹಿತ್ಯ ಸೇವೆಗೆ ಸನ್ಮಾನ ಸ್ವೀಕರಿಸಿ, ಪ್ರತಿಕ್ರಿಯಿಸಿ ಮಾತನಾಡಿದರು.
ಅತಿಥಿಗಳಾದ ವಿಶ್ರಾಂತಇತಿಹಾಸ ಪ್ರಾಧ್ಯಾಪಕ ಪ್ರೊ. ಎಂ.ವಾಯ್.ಸಾವಂತ ಮಾತನಾಡಿ, ಸರೋಜಾಕುಲಕರ್ಣಿ ಆಳವಾಗಿ ಮತ್ತುಗಂಭೀರವಾಗಿ ವಿಚಾರಿಸಿ ತಮ್ಮ `ಆಳ’ ಕವನ ಸಂಕಲನ ಕೃತಿ ಬರೆದಿದ್ದಾರೆ.ಇಂದಿನ ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸ್ವರಚಿತ ಕವನ ಬರೆಯುವ ಹವ್ಯಾಸವನ್ನು ಬೆಳೆಸಬೇಕು.ಅಂದಾಗ ಭವಿಷ್ಯದಲ್ಲಿಅವರುಉತ್ತಮ ಕವಿಗಳಾಗಲು ಸಾಧ್ಯಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಸಾಹಿತ್ಯರಚನೆ ಸಮಾಜಿಕ ಬದಲಾವಣೆಗೆ ಪೂರಕವಾಗಿರಬೇಕು.ಅಲ್ಲಿ ಮಾನವೀಯತೆಯತುಡಿತವಿರಬೇಕು.ಸರೋಜಾಕುಲಕರ್ಣಿಅವರಕೃತಿರಚನೆಯಲ್ಲಿಅವರ ಮನೆತನದರಾಜಕೀಯ ಹಾಗೂ ಸಾಂಸ್ಕøತಿಕ ಹಿನ್ನೆಲೆಯೂಇದೆಎಂದು ಹೇಳಿದರು.
ಶಂಕರ ಕುಂಬಿ ಸ್ವಾಗತಿಸಿದರು.ಮನೋಜ ಪಾಟೀಲ ಪರಿಚಯಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ನರೇಗಲ್ ಸನ್ಮಾನ ಪತ್ರಓದಿದರು.ವೀರಣ್ಣಒಡ್ಡೀನ ನಿರೂಪಿಸಿದರು.ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ ಅತಿಥಿಗಳನ್ನು ಗೌರವಿಸಿದರು. ಪ್ರೊ.ಬಿ.ಎಚ್.ಕೋಟೆಗೌಡರ ವಂದಿಸಿದರು.