ಭರಮಖೋಡಿಯಲ್ಲಿ “ಆನಂದ ಟೊಣಪಿ ಗೋ ಮಂದಿರ” ಉದ್ಘಾಟನೆ
ಅಥಣಿ : ಮೇ.12:ಕೃಷಿ ಪ್ರದಾನ ದೇಶವಾದ ಭಾರತದಲ್ಲಿ ಗೋವು ರಕ್ಷಣೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು. ಜೀವನದುದ್ದಕ್ಕೂ ಮನುಷ್ಯ ಹಾಗೂ ಪ್ರಕೃತಿಗೆ ಕೊಡುಗೆ ನೀಡುವ ಗೋವುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ದೇಸಿ ರಾಸುಗಳ ಸಾಕಾಣಿಕೆ ಹೆಚ್ಚಲಿ ಎಂದು ಸಮಾಜ ಸೇವಕ ಆನಂದ ಟೊಣಪಿ ಹೇಳಿದರು
ಅವರು ಅಥಣಿ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಚಮಕೇರಿ ರಸ್ತೆ ಭರಮಖೋಡಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜನಕಲ್ಯಾಣ ಪ್ರತಿಷ್ಟಾನ ಅಡಿಯಲ್ಲಿ “ಆನಂದ ಟೊಣಪಿ ಗೋ ಮಂದಿರ” ವನ್ನು ಆನಂದ ಟೊಣಪಿ ದಂಪತಿ ಸಮೇತ ಗೋವು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಗೋವು ಕೇವಲ ಒಂದು ಪ್ರಾಣಿಯಲ್ಲ. ನಮ್ಮ ದೇಶದ ಸಂಸ್ಕøತಿಯಲ್ಲಿ ಗೋವುಗಳಿಗೆ ಮಹತ್ವಸ್ಥಾನ ನೀಡಲಾಗಿದೆ. ಭೂ ತಾಯಿಗೂ ಅಕ್ಕರೆಯ ಆಹಾರ ಉಣಬಡಿಸುವ ಗೋಮಾತೆಯ ಸೇವೆ, ದೇಶಕ್ಕೆ ಸಲ್ಲಿಸುವ ಸೇವೆಯಿದ್ದಂತೆ ಆ ನಿಟ್ಟಿನಲ್ಲಿ ಮಹಾದೇವ ಬಿರಾದಾರ ದಂಪತಿ ಪ್ರಾರಂಭ ಮಾಡಿದ ಈ “ಗೋ ಮಂದಿರ” ಬೆಳೆಯಲಿ ಎಂದರು.
ಈ ವೇಳೆ ಗೋ ಮಂದಿರ ಅಧ್ಯಕ್ಷ ಮಹಾದೇವ ಬಿರಾದಾರ ಮಾತನಾಡಿ ನಮ್ಮ ಗೋ ಮಂದಿರಕ್ಕೆ ಆನಂದ್ ಟೋಣಪಿ ದಂಪತಿಗಳು ಸಹಾಯ ಸಹಕಾರವನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ನಾವು ಗೋ ಮಂದಿರವನ್ನು ಪ್ರಾರಂಬಿಸಿದ್ದೇವೆ. ಎಲ್ಲಾ ಸಾರ್ವಜನಿಕ ಭಾಂದವರು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ದುಂಡಪ್ಪ ಕಲಗುಣಿ, ಮುಖಂಡರಾದ ಅಣ್ಣಪ್ಪ ಭಜಂತ್ರಿ. ಅಶ್ವಿನಿ ಭಜಂತ್ರಿ. ಆದಿತ್ಯ ಭಜಂತ್ರಿ. ಎಲ್ ಎಸ್ ಮಠಪತಿ. ಭಾಗ್ಯವಂತಿ ಬಿರಾದಾರ ಶ್ರೀಧರ್ ಮಠಪತಿ, ಈರಣ್ಣ ಅಡಿಗಲ್ಲ, ಸೇರಿದಂತೆ ಇತರರು ಇದ್ದರು.