ವೈಚಾರಿಕತೆಯ ಬದಲಾವಣೆ ಕೃತಿಗಳಿಂದ ಮಾತ್ರ ಸಾಧ್ಯ: ಯೋಗಾನಂದರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.12 : ನಗರದ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ನಗರದ  ಡಾ. ಗಡ್ಡಿ ದಿವಾಕರ ಅವರ  ‘ ಮೌನ ಮಿಡಿದ ಮಾತು ‘ ಕೃತಿಯನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿನ ಸದಸ್ಯ ಡಾ. ವೈ .ಸಿ ಯೋಗಾನಂದ ರೆಡ್ಡಿ ಅವರು ಬಿಡುಗಡೆ ಮಾಡಿದರೆ.  ಪುಸ್ತಕ ಪರಿಚಯವನ್ನು ಪಿ. ದಿವಾಕರ ನಾರಾಯಣ ನೆರವೇರಿಸಿದರು.
ಕೃತಿ ಬಿಡುಗಡೆ ಮಾಡಿದ ಡಾ.ಯೋಗಾನಂದರೆಡ್ಡಿ ಅವರು ವೈಚಾರಿಕತೆಯ ಬದಲಾವಣೆ ವಾಟ್ಸಾಪ್, ಪೋನ್, ಫೇಸ್ ಬುಕ್ ನಿಂದ ಅಲ್ಲ. ಸಮಾಜವನ್ನು ತಿದ್ದು ಬಲ್ಲಂತಹ ವಸ್ತುವುಳ್ಳ, ವಿಮರ್ಶಾತ್ಮಕವಾದ  ಕೃತಿಗಳಿಂದ ಮಾತ್ರ ಸಾಧ್ಯ, ಆದರೆ ಕೃತಿಗಳ ಯಶ್ವಿಗೆ ಓದುಗರ ಬಳಗವೂ ಬೇಕು ಎಂದರು.
ಪುಸ್ತಕ ಪರಿಚಯ ಮಾಡಿದ  ಪಿ. ದಿವಾಕರ ನಾರಾಯಣ ಅವರು. ಕೃತಿಯ 48 ಕವನಗಳಲ್ಲಿ  ವಚನಕಾರ, ದಾಸರ ಪ್ರಭಾವ ಕಂಡು ಬರುತ್ತಿದೆ. ದಿವಾಕರ ಅವರು ಕಂಡು ಕೇಳಿದ್ದನ್ನು ಕವಿತಗಳನ್ನಾಗಿ ರೂಪಿಸಿದ್ದಾರೆ. ತಮ್ಮ ಯೌವ್ವನದ, ಈಭಾಗದ ರೈತರ, ಆಧ್ಯಾತ್ಮ ವಿಚಾರಗಳನ್ನು ಕವಿತಗಳಲ್ಲಿ ಬಿಂಬಿಸಿದ್ದಾರೆಂದರು. 
ಲೇಖಕ ಡಾ ದಿವಾಕರ ಗಡ್ಡಿ ಮಾತನಾಡಿ, ನನ್ನ ವೃತ್ತಿ ಬದುಕಿನಲ್ಲಿನ ಕಂಡ, ಕೇಳಿದ, ವಿಷಯಗಳನ್ನು ಕವನಗಳನ್ನಾಗಿ ಬರೆದೆ. ಅವನ್ನು ಫೇಷ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ. ಅವನ್ನೆಲ್ಲ ಅನೇಕರು ಮೆಚ್ಚಿದರು. ಅವನ್ನೇ ಇಂದು ಕೃತಿ ರೂಪದಲ್ಲಿ ಮುಂದಿಟ್ಟಿರುವೆಂದರು. 
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ವೇದಿಕೆಯಲ್ಲಿ ಇದ್ದರು.
ನಂತರ  ಸಮಕಾಲಿನ ಸಣ್ಣ ಕಥೆಗಳ ಕುರಿತು ಸಂವಾದವನ್ನು ಹಿರಿಯ ಲೇಖಕ ಕೇಶವ ಮಳಗಿ ನಡೆಸಿಕೊಟ್ಟರು. ಸಂವಾದದಲ್ಲಿ ಕತೆಗಾರರಾದ ದಯಾನಂದ ,ಸ್ವಾಮಿ ಪೊನ್ನಾಚಿ , ಸಂಪತ್ ಸಿರಿಮನೆ, ಅನುಪಮಾ ಪ್ರಸಾದ್ ,ಅನಿಲ್ ಗುನ್ನಾಪುರ ಭಾಗವಹಿಸಿದ್ದರು. ಲೇಖಕ ಟಿ. ಎಸ್ . ಗೊರವರ ಉಪಸ್ಥಿತರಿರುವರು.
ದಸ್ತಗಿರಿಸಾಬ್ ದಿನ್ನಿ ಕಾರ್ಯಕ್ರಮ ನಿರೂಪಿಸಿದರು.