ಸಂಗೀತ ಸಂಜೆ, ವಚನ ಗಾಯನ
ಧಾರವಾಡ,ಮೇ12: ಸಂಗೀತ, ಸಾಹಿತ್ಯ ಬೆಳವಣಿಗೆಯಲ್ಲಿ ಮತ್ತು ನಾಡು-ನುಡಿ ಸಂರಕ್ಷಣೆಯಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರತುಂಬಾದೊಡ್ಡದುಎಂದುಡಾ.ಎಚ್ ವಿ ಬೆಳಗಲಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಯುವಜನ ಮಂಟಪ ಹುಬ್ಬಳ್ಳಿಯ ಶಿರೂರ ಪಾರ್ಕ್ ಬಡಾವಣೆಯ 2 ಹಾಗೂ 3ನೇ ಹಂತಗಾರ್ಡನ್‍ನಲ್ಲಿರುವ ವೇದಿಕೆಯಲ್ಲಿ ಏರ್ಪಡಿಸಿದ್ದ ಸಂಗೀತ ಸಂಜೆ ಹಾಗೂ ವಚನ ಗಾಯನಕಾರ್ಯಕ್ರಮ ಉದ್ಘಾಟಿಸಿ, ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದುಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕ್ರಮಗಳು ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮಆಯೋಜಿಸುತ್ತಾ ನಾಡು ನುಡಿಗೆದಕ್ಕೆ ಬಂದಾಗದ್ವನಿ ಎತ್ತಿ ಹೋರಾಡಿದ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘವಾಗಿದೆ.134 ವರ್ಷ ಪೂರೈಸಿದ ಸಂಘವು ಇಂದಿಗೂ ತನ್ನಘನತೆಯನ್ನು ಉಳಿಸಿಕೊಂಡು ಕನ್ನಡಕ್ಕೆಧಕ್ಕೆ ಬಂದಾಗಲೆಲ್ಲಾಗುಡುಗುತ್ತಿದೆಎಂದರು.
ಉಪನ್ಯಾಸಕರಾಗಿ ಆಗಮಿಸಿದ ಜಾನಪದ ವಿದ್ವಾಂಸರಾದಡಾ.ರಾಮೂ ಮೂಲಗಿ ಅವರುತಮ್ಮ ಲಾವಣಿ ಹಾಡುಗಳ ಮೂಲಕ ಜಗಜ್ಯೋತಿ ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಅವರಇತಿಹಾಸವನ್ನು ಹೇಳಿದರು.ನಾಡಿನದಾರ್ಶನಿಕರ ಆದರ್ಶಗಳಿಂದು ಯುವಕರಿಗೆ ಮುಟ್ಟಿಸಬೇಕಾಗಿದೆ.ಅಂತಹ ಕೆಲಸವನ್ನುಕರ್ನಾಟಕ ವಿದ್ಯಾವರ್ಧಕ ಸಂಘವು ನಿರಂತರವಾಗಿಯುವಕರಿಗೆ ಹಲವಾರುಕಾರ್ಯಕ್ರಮಆಯೋಜಿಸುತ್ತ ಪೆÇ್ರತ್ಸಾಹ ಮಾಡುತ್ತ ಬಂದಿದೆಎಂದರು.
ಸಮಾರಂಭದಅಧ್ಯಕ್ಷತೆಯನ್ನುಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ ಅವರು ವಹಿಸಿದ್ದರು.
ಸಮಾರಂಭದಲ್ಲಿ ಶಿರೂರ ಪಾರ್ಕಿನ ನಿವಾಸಿಗಳಾದ ಡಾ. ಪ್ರತೀಕಅನಂತ ಪದ್ಮನಾಭ ಐತಾಳ ಅವರು ಎಂ.ಬಿ.ಬಿ.ಎಸ್ ನಲ್ಲಿ ಬಂಗಾರದ ಪದಕ ಪಡೆದದಕ್ಕಾಗಿ ಹಾಗೂ ಕುಮಾರಿ. ಧಾನೇಶ್ವರಿ ನಾಗರಾಜಕೋರಿಅವರುಎಂ.ಟೆಕ್ ನಲ್ಲಿ ಬಂಗಾರದ ಪಡೆದದ್ದಕ್ಕಾಗಿ ಮತ್ತು ನಂದಿನಿ ಶೈಲೇಶ ಹೊನ್ನಳ್ಳಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇಕಡಾ 92.2% ಅಂಕ ಪಡೆದದ್ದಕ್ಕಾಗಿ ಗೌರವಿಸಿ ಸನ್ಮಾನಿಸಲಾಯಿತು.
ಹುಬ್ಬಳ್ಳಿಯ ಖ್ಯಾತ ಸಂಗೀತಗಾರರಾದ ಶ್ರೀಮತಿ ಶೋಭಾಜಾಬಿನ್ ವಚನ ಗಾಯನ ನಡೆಸಿಕೊಟ್ಟರು.
ಸಮಾರಂಭದಲ್ಲಿ ಎಂ.ವಿ. ಕರಮರಿ, ಎಸ್. ಎಸ್. ಹಂಗರಕಿ ಉಪಸ್ಥಿತರಿದ್ದರು.ಯುವಜನ ಮಂಟಪದ ಸಂಚಾಲಕರಾದಡಾ.ಮಹೇಶ ಧ. ಹೊರಕೇರಿ ನಿರೂಪಿಸಿದರು. ಸದಸ್ಯರಾದ ಜಿ. ವಿ. ಹಿರೇಮಠ, ಮೃತ್ಯುಂಜಯ ಕಮಡೊಳ್ಳಿಶೆಟ್ಟರ ಹಾಗೂ ಶಿರೂರ ಪಾರ್ಕಿನ ನಿವಾಸಿಗಳು ಉಪಸ್ಥಿತರಿದ್ದರು.