ಕಲಾವಿದರ ಮಾಶಾಸನ ಹೆಚ್ಚಿಸಿದ ಸರಕಾರಕ್ಕೆ ಕೃತಜ್ಞತೆ
ಬೀದರ್ ಸೆ. ೨೩ಃ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ (ರಿ)ದ ಮನವಿ ಮೇರೆಗೆ ಕಲಾವಿದರ ಮಾಶಾಸನವನ್ನು ೨,೦೦೦ ಸಾವಿರ ರೂ. ಗಳಿಂದ ೩.೦೦೦ ಸಾವಿರ ರೂಪಾಯಿ ಹೆಚ್ಚಿಸುವುದಾಗಿ ಭರವಸೆ ನೀಡಿರುವುದನ್ನು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಪತ್ರಿಕಾ ಪ್ರಕಟಣೆ ನೀಡಿ ಸ್ವಾಗತಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಒಕ್ಕೂಟವೂ ಸರ್ಕಾರಕ್ಕೆ ಮನವಿ ಅರ್ಪಿಸಿ, ಕಲಾವಿದರ ಮಾಶಾಸನ ೫,೦೦೦ ರೂ. ವರೆಗೆ ಹೆಚ್ಚಿಸಬೇಕೆಂದು ಮನವಿ ಮಾಡಿತ್ತು, ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸೆ.೧೯ ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ೩,೦೦೦ ರೂ. ಘೋಶಿಸಿರುವರು. ಕಲಾವಿದರ ಬದುಕು ಬವಣೆಯ ಸಮಸ್ಯೆಗಳನ್ನರಿತ ಒಕ್ಕೂಟ ಸರ್ಕಾರಕ್ಕೆ ಒಟ್ಟು ೧೦ ಬೇಡಿಕೆಗಳನ್ನು ಈಡೆರಿಸುವಂತೆ ಕೋರಿತ್ತು, ರಾಜ್ಯದಲ್ಲಿನ ಸರಕಾರದ ಹಲವಾರು ಟ್ರಸ್ಟ್ ಪ್ರತಿಷ್ಠಾನದ ಮಾದರಿಯಲ್ಲಿ ಬೀದರಿನಲ್ಲಿ ಜಗದೇವಿ ತಾಯಿ ಲಿಗಾಡೆ, ಪ್ರಭುರಾವ್ ಕಂಬಳಿವಾಲೆ, ಕಲಬುರಗಿಯಲ್ಲಿ ಎಸ್.ಎಮ್. ಪಂಡಿತ್, ಯಾದಗಿರಿಯಲ್ಲಿ ಎಮ್.ಆರ್.ಶೇಟ್ಟರ್, ರಾಯಚೂರಿನಲ್ಲಿ ಪಂಡಿತ್ ಸಿದ್ರಾಮ್ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ.ಸಿದ್ದಯ್ಯಾ ಪುರಾಣೀಕ, ಬಳ್ಳಾರಿಯಲ್ಲಿ ಡಾ.ಸುಭದ್ರಮ್ಮ ಮನಸೂರ್, ಹಾಗೂ ವಿಜಯನಗರದಲ್ಲಿ ಎಂ.ಪಿ. ಪ್ರಕಾಶ ಅವರ ಹೆಸರಿನಲ್ಲಿ ಸರಕಾರದಿಂದ ಪ್ರತಿಷ್ಠನ ಸ್ಥಾಪಿಸಬೇಕೆಂದು ಕೊರಲಾಗಿತ್ತು, ಈ ಬೇಡಿಕೆಳಗನ್ನು ಕೂಡ ಈಡೇರಿಸಿತ್ತು ಸರಕಾರ ನುಡಿದಂತೆ ನಡೆದು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ.
ಕಲಾವಿದರಿಗೆ ಮಾಶಾಸನ ಪಡೆಯಲು ವಯಸ್ಸು ೫೮ ರಿಂದ ೫೦ ಕ್ಕೆ ಇಳಿಸಬೇಕು ಕಲಾವಿದರಿಗೆ ಸರ್ಕಾರವೇ ಗುರುತಿನ ಚೀಟಿ ವಿತರಿಸಿಸಬೇಕೆಂದಿತ್ತು ಸರಕಾರ ಈ ಬೇಡಿಕೆಯೂ ಈಡೇರಿಸಿದೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ ಜಂಟಿ ನಿರ್ದೇಶಕರನ್ನು ನೇಮಿಸಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.