ಸಿಯುಕೆಯಿಂದ ಸುಂಟನೂರು ಗ್ರಾಮದಲ್ಲಿ ‘ಸ್ವಚ್ಛತಾ ಹಿ ಸೇವಾ’ ಚಟುವಟಿಕೆಗಳ ಆಯೋಜನೆ
ಕಲಬುರಗಿ:ಸೆ.22:“ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅತ್ಯಂತ ಸ್ವಚ್ಛತೆ ಇಡುವುದೆ ನಿಜವಾದ ಸಂಪತ್ತು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಹೇಳಿದರು.
ಅವರು ಇಂದು ಆಳಂದ ತಾಲೂಕಿನ ಸುಂಟನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಿಯುಕೆ ಆಯೋಜಿಸಿದ್ದ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮದಲ್ಲಿ ಅ್ಯ ಕ್ಷತೆ ವಹಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಇದು ನಮ್ಮನ್ನು ರೋಗಗಳಿಂದ ದೂರವಿಡುತ್ತದೆ ಮತ್ತು ನಮ್ಮ ಜೀವನದ ಗುಣಮಟ್ಟ, ಆರೋಗ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ನಮ್ಮ ಮನೆ, ಸುತ್ತಮುತ್ತ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಸಾಧಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಪಂಚಾಯತ್ ಸುಂಟ್ನೂರು, ಪ್ರವೀಣ್ ಕುಮಾರ್ ಉಡುಗಿ ಅವರು ಮಾತನಾಡಿ, “ನಮ್ಮ ಗ್ರಾಮವನ್ನು ಸ್ವಚ್ಛ, ನೈರ್ಮಲ್ಯ ಮತ್ತು ಸುರಕ್ಷಿತವಾಗಿಡಲು ಪ್ರತಿಯೊಬ್ಬರೂ ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಸಬೇಕು. ನಿಮ್ಮಲ್ಲಿ ಅನೇಕರು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದೀರಿ, ಆದರೆ ಅವುಗಳನ್ನು ಸರಿಯಾಗಿ ಬಳಸುತ್ತಿಲ್ಲ. ಶೌಚಾಲಯಗಳನ್ನು ಬಳಸದಿದ್ದರೆ, ಅವುಗಳನ್ನು ನಿರ್ಮಿಸುವುದರಲ್ಲಿ ಏನು ಅರ್ಥ. ಆದ್ದರಿಂದ ನಿರ್ಮಿಸಿದವರು ಅವುಗಳನ್ನು ನಿಯಮಿತವಾಗಿ ಬಳಸಬೇಕು ಮತ್ತು ನಿರ್ಮಿಸದಿರುವವರು ಆದಷ್ಟು ಬೇಗ ನಿರ್ಮಿಸಿ” ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಸಿಯುಕೆ ವತಿಯಿಂದ ಗ್ರಾಮದ ಸ್ವಚ್ಛತಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಸ್ವಚ್ಚತಾ ನಡಿಗೆ, ಗ್ರಾಮ ಸ್ವಚ್ಛತಾ ಅಭಿಯಾನ, ಸ್ವಚ್ಛತಾ ಪ್ರತಿಜ್ಞೆ ಮತ್ತು ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಲಾಯಿತು. ವಾಕಥಾನ್‍ನಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಸಿಯುಕೆ ಎನ್‍ಎಸ್‍ಎಸ್ ಸ್ವಯಂಸೇವಕರು, ಎಂಎಸ್‍ಡಬ್ಲ್ಯೂ ಮತ್ತು ಬಿಎಸ್‍ಡಬ್ಲ್ಯೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ಎಎನ್‍ಎಂ ಸಿಬ್ಬಂದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಗಣಪತಿ ಬಿ ಸಿನ್ನೂರ, ಎನ್‍ಎಸ್‍ಎಸ್ ಸಂಯೋಜಕಿ ಡಾ.ದೀಪ್ತಿ, ಸುಂಟನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅಂಬಿಕಾ ಹುಲಮನಿ ಉಪಸ್ಥಿತರಿದ್ದರು. ಶ್ರೀ ಸಂಜಯ ಕುಮಾರ್ ಐಸಿಟಿ ಸಂಯೋಜಕರು ತಾಲೂಕು ಪಂಚಾಯತ್, ಆಳಂದ ಅವರು ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸ್ವಚ್ಛತಾ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡಿದರು. ಕುಮಾರಿ ಉಮಾಶ್ರೀ ಖಾನಾಪುರ ಅವರು ಪ್ರಾರ್ಥನಾ ಗೀತೆ ಹಾಡಿದರು, ಕಾರ್ಯಕ್ರಮ ಸಂಯೋಜಕಿ ಪೆÇ್ರ.ಪವಿತ್ರಾ ಆರ್.ಆಲೂರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು, ಶ್ರವಣಕುಮಾರ ವರವಿ ವಂದಿಸಿದರು.