ಮಹಿಳಾ ಹೊರಗುತ್ತಿಗೆ ನೌಕರರಿಗೆ ಛತ್ರಿ ವಿತರಣೆ
ಕಲಬುರಗಿ:ಸೆ.22:ರೋಟರಿ ಕ್ಲಬ್ ಗುಲ್ಬರ್ಗಾ ಮಿಡ್‍ಟೌನ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಮಹಿಳಾ ಹೊರಗುತ್ತಿಗೆ ನೌಕರರಿಗೆ ಛತ್ರಿ (ಕೊಡೆ)ಗಳನ್ನು ವಿತರಿಸಿತು.
ಈ ಕಾರ್ಯಕ್ರಮದಲ್ಲಿ ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್. ಕ್ಲಬ್‍ನ ಅಧ್ಯಕ್ಷ ನಾಗರಾಜ್ ಪಾಟೀಲ್, ಕಾರ್ಯದರ್ಶಿ ವಾಮನರೆಡ್ಡಿ, ಅಂಬಾದಾಸ್ ಮತ್ತು ಯೋಜನಾ ಅಧಿಕಾರಿ ಡಾ.ಅನಂತ್ ಡಿ ಚಿಂಚುರೆ ಉಪಸ್ಥಿತರಿದ್ದರು.
ಡಾ.ಅನಂತ್ ಡಿ ಚಿಂಚೂರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನಾಗರಾಜ್ ಪಾಟೀಲ್ ಸ್ವಾಗತಿಸಿದರೆ, ವಾಮನರೆಡ್ಡಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಿಯುಕೆ ಸುಮಾರು 40 ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು.