ರಾಜಧಾನಿಯಲ್ಲಿ ಧರೆಗುರುಳಿದ 271 ಮರ
ಬೆಂಗಳೂರು.ಮೇ೧೨: ಕೆಲ ದಿನಗಳಿಂದ ಬೆಂಗಳೂರಲ್ಲಿ ಮಳೆಯಾಗುತ್ತಿದ್ದು, ಐದು ದಿನಗಳ ಅವಧಿಯಲ್ಲಿ ೨೭೧ ಮರಗಳು ಧರೆಗೆ ಉರುಳಿವೆ.
ಬೆಂಗಳೂರು ದಕ್ಷಿಣ ವಲಯ, ಆರ್.ಆರ್. ನಗರ ಮತ್ತು ಪೂರ್ವ ವಲಯದಲ್ಲಿ ಹೆಚ್ಚು ಮರಗಳು ನೆಲಕ್ಕುರುಳಿವೆ. ಮರದ ರೆಂಬೆ, ಕೊಂಬೆ ಮುರಿದಿವೆ ಎಂದು ೪೦೦ ಕ್ಕೂ ಹೆಚ್ಚು ದೂರುಗಳು ಸಂಬಂಧಪಟ್ಟ ಅಧಿಕಾರಿಗಳ ಬಳಿ ದಾಖಲಾಗಿವೆ.
ಬಿಬಿಎಂಪಿಗೆ ಮರ ಬಿದ್ದಿರುವ ಬಗ್ಗೆ ಸಾಲು ಸಾಲು ದೂರು ಕೇಳಿಬಂದಿದೆ. ಬಿಬಿಎಂಪಿ ಮರ ತೆರವು ಮಾಡಲು ೨೬ ತಂಡಗಳನ್ನ ರಚನೆ ಮಾಡಲಾಗಿದೆ. ೮ ವಲಯಗಳಲ್ಲೂ ೨೬ ತಂಡ ರಚನೆ ಮಾಡಿ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
೬ನೇ ತಾರೀಖು ೧೨೬ ಮರಗಳು ಬಿದ್ದಿವೆ. ೮ನೇ ತಾರೀಖು ೭೦ ಮರ, ೯ ರಂದು ೪೪, ೧೦ ರಂದು ೩೨ ಮರ ಧರೆಗೆ ಬಿದ್ದಿವೆ.