ಶೇ.88 ರಷ್ಟು ಫಲಿತಾಂಶ
ಲಕ್ಷ್ಮೇಶ್ವರ, ಮೇ12: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಎಸ್ ಎಸ್ ಕೂಡ್ಲುಮಠ ಮಾಧ್ಯಮಿಕ ಶಾಲೆಯ ಕನ್ನಡ ಮಾಧ್ಯಮದ ಫಲಿತಾಂಶ ಶೇಕಡಾ 88 ರಷ್ಟು ಆಗಿದೆ.
ಶಾಲೆಯ ಗೌರಮ್ಮ ಸುರೇಶ್ ಅಂಗಡಿ 625 ಅಂಕಗಳಿಗೆ 536 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮವಾಗಿದ್ದರೆ ದೀಪಾ ಈಶ್ವರ ಗೌಡ ಪಾಟೀಲ್ 625 ಅಂಕಗಳಿಗೆ 520 ಅಂಕಗಳನ್ನು ಚೇತನ್ ಎಂ ಪತ್ತಾರ್ 625 ಅಂಕಗಳಿಗೆ 512 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಆಡಳಿತ ಮಂಡಳಿಯ ಛೇರ್ಮನಾದ ಎಸ್ ಪಿ ಬಳಿಗಾರ ವಾಯ್ಸ್ ಚೇರ್ಮನ್ನರಾದ ಹನುಮಂತಪ್ಪ ತಳವಾರ್ ಸಿಎಂ ರಾಗಿ ಶಾಲೆಯ ಮುಖ್ಯೋಪಾಧ್ಯಾಯರು ಆಡಳಿತ ಮಂಡಳಿಯ ನಿರ್ದೇಶಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.