ಅನನ್ಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜನಲ್ಲಿ ಬಸವಣ್ಣನವರ ಜಯಂತಿ ಆಚರಣೆ
ಕಲಬುರಗಿ:ಮೇ.12: ಹಂಸಿಕಾ ಎಜ್ಯುಕೇಶನ ವೇಲ್‍ಫೇರ್ ಟ್ರಸ್ಟ್ (ರಿ) ನ ಅಡಿಯಲ್ಲಿ ಅನನ್ಯ ಪದವಿ ಮತ್ತು ಸ್ನಾನಕೋತ್ತರ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವಗುರು ಬಸವಣ್ಣ ನವರ 891ನೇ ಜಯಂತೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಭೀಮಾಶಂಕರ ಹೊನ್ನಾಶೆಟ್ಟಿ ಅವರು ಬಸವಣ್ಣನವರ ಹೇಳಿದ ಕಾಯಕವೇ ಕೈಲಾಸ ಎಂಬ ಒಂದು ವಚನದ ಮೂಲಕ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಕಾಲೇಜಿನ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜಿ ಅವರು ಕೂಡ ಬಸವಣ್ಣನವರ ಕುರಿತು ಅವರು ಹೇಳಿದ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆಯಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ: ಶರಣಪ್ಪಾ ಹೊನ್ನಾಗೆಜ್ಜಿ (ಪೂಜಾರಿ), ಅವರು ಬಸವಣ್ಣ ವಚನಗಳು ಅದರ ಪ್ರಾಮುಖ್ಯತೆ ಮತ್ತು ವಿದ್ಯಾರ್ಥಿಗಳೇ ದಿನಕೊಂದು ವಚನಗಳನ್ನು ಓದಿ ಅದರ ಸಾರಾಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿನಿಯಾದ ಸಿದ್ದಮ್ಮ ಬಿ.ಎ. ಪ್ರಥಮ ವರ್ಷ ಬಸವಣ್ಣನವರ ಕುರಿತು ಮಾತನಾಡಿದರು. ಕಾಲೇಜಿನ ಉಪನ್ಯಾಸಕರಾದ ಆಶಾರಾಣಿ ಕಲಕೋರಿ, ಅಕ್ಷತಾ ಪಾಟೀಲ, ರಾಜೇಶ್ವರಿ ಮತ್ತು ಸುಜಾತಾ ಮತ್ತು ವಿದ್ಯಾರ್ಥಿಗಳು ಇದ್ದರು.