ರೈತನ ಮಗಳು ಶಾಲೆಗೆ ಪ್ರಥಮ
ಅಫಜಲಪುರ:ಮೇ.12: 2023-24ನೇ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಆನೂರ ಗ್ರಾಮದ ರೈತ ಶಿವಪ್ಪ ಕನ್ನೋಳಿ ಅವರ ಮಗಳು ಶ್ರೀಲತಾ ಕನ್ನೊಳ್ಳಿ ವಿದ್ಯಾರ್ಥಿನಿಯು ಆನೂರ ಸರ್ಕಾರಿ ಪ್ರೌಢ ಶಾಲೆಗೆ 510 ಅಂಕಗಳು ಪ್ರತಿಶತ ಶೇ. 82 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯ ಸಾಧನೆ ಹಿನ್ನೆಲೆ ಮುಖ್ಯ ಶಿಕ್ಷಕರು, ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಮತ್ತು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.