ಸಂಗೀತ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ
ಅಫಜಲಪುರ:ಮೇ.12: ಸ್ವರ ಸಿಂಚನ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟಿನ ವತಿಯಿಂದ ಬಸವ ಜಯಂತಿ ಪ್ರಯುಕ್ತ ಅಫಜಲಪುರ ಮತಕ್ಷೇತ್ರದ ಹೇರೂರ(ಬಿ) ಗ್ರಾಮದಲ್ಲಿ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಉದ್ಘಾಟನೆಯನ್ನು ಬಿಜೆಪಿ ಮುಖಂಡ ಬಸವರಾಜ ಸಿದ್ದಣ್ಣನರ ನೆರವೇರಿಸಿದರು. ರಾಮು ಕಲ್ಲೂರ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಭೀಮಾಶಂಕರ ಹೂಗಾರ, ಪರಮಾನಂದ ಯಲಗೋಡ, ಹುಲಿ ಕಲಶೆಟ್ಟಿ, ರಾಚಯ್ಯ ಸ್ವಾಮಿ, ಸಂದೇಶ ಕಡಗಂಚಿ, ಲಕ್ಷ್ಮೀ ಜೇವರ್ಗಿ, ನಿಖಿತಾ ಕಲಬುರಗಿ, ಬಸವರಾಜ ಕಲಬುರಗಿ ಸೇರಿದಂತೆ ಸಂಗೀತ ಕಲಾಭಿಮಾನಿಗಳು ಇದ್ದರು.