ಶರಣರ ದಾರ್ಶನಿಕರ ಭಾವಚಿತ್ರಗಳ ಅನಾವರಣ
ವಿಜಯಪುರ.ಮೇ.೧೨- ಪ್ರತಿಯೊಬ್ಬರಿಗೂ ನಮ್ಮ ಶರಣರ ಕಾಯಕ ಹಾಗೂ ಜೀವನ ವೃತ್ತಾಂತಗಳು ತಿಳಿಸುವ ಸಲುವಾಗಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬೇಕರಿ ಬಿ ಶಿವಣ್ಣರವರು ತಮ್ಮ ಸ್ವಂತ ವೆಚ್ಚದಿಂದ ಎಲ್ಲಾ ಶರಣರುಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಮೂಲಕ ಶರಣ ತತ್ವ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರು, ಶೂನ್ಯ ಪೀಠ ಸಿಂಹಾಸನದೀಶ್ವರರಾದ ಅಲ್ಲಮಪ್ರಭುಗಳು, ವೀರಗಂಟೆ ಮಡಿವಾಳ ಮಾಚಿದೇವರು, ಬಹುರೂಪಿ ಚೌಡಯ್ಯನವರು, ಚಮ್ಮುಗೆಗಳ ಶಿರದ ಮೇಲೆ ಹೊತ್ತ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು, ಶಿವಯೋಗಿ ಸಿದ್ದರಾಮೇಶ್ವರರು, ಹಡಪದ ಅಪ್ಪಣ್ಣ ಮತ್ತು ಹಡಪದ ಲಿಂಗಮ್ಮ ದಂಪತಿಗಳು, ಕಸ ಗುಡಿಸುವ ಶರಣೆ ಸತ್ಯಕ್ಕಾರವರು, ವೀರ ವೀರಾಗಿಣಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಚಿನ್ಮಯ ಜ್ಞಾನಿ ಚೆನ್ನಬಸವಣ್ಣ, ಲಿಂಗಾಂಗ ಯೋಗಿ ಸಿದ್ದರಾಮೇಶ್ವರರು, ವೀರಮಾತೆ ಅಕ್ಕ ನಾಗಲಾಂಬಿಕೆ,ಹಾಗೂ ಫ.ಗು.ಹಳಕಟ್ಟಿ, ಹರಡಿಕರ್ ಮಂಜಣ್ಣ, ಮೊದಲಾದವರ ಭಾವಚಿತ್ರಗಳನ್ನು ಪ್ರದರ್ಶಿಸಿದರು.