ಎರಡು ದಿನದ ವಾರ್ಷಿಕ ಸಮ್ಮೇಳನಕ್ಕೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.12:- ಎರಡು ದಿನಗಳ ಕರ್ನಾಟಕ ಎಂಡೋಕ್ರೈನ್ ಸೊಸೈಟಿಯ 6ನೇ ವಾರ್ಷಿಕ ಸಮ್ಮೇಳನವಾದ ಹಾರ್ಮೋನ್ ರಿದಮ್ ಅನ್ನು ಮೈಸೂರು ಮೆಡಿಕಲ್ ಕಾಲೇಜಿನ ಹೊಸ ಲೈಬ್ರರಿ ಕ್ಯಾಂಪಸ್ ನಲ್ಲಿ ನಡೆಸಲಾಯಿತು.
ಈ ಸಮ್ನೇಳನದ ಮುಖ್ಯ ಅತಿಥಿಯಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ದಾಕ್ಷಾಯಿಣಿ, ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ ವಿಸಿ ಡಾ.ಶೇಖರ್, ಕರ್ನಾಟಕ ಎಂಡೋಕ್ರೈನ್ ಸೊಸೈಟಿಯ ಡಾ.ಅರ್ಪಣದೇವ್, ಡಾ.ಸೋಮಶೇಖರ ರೆಡ್ಡಿ, ಮೈಸೂರು ಎಂಡೋಕ್ರೈನ್ ಸೊಸೈಟಿಯ ಛೇರ್ಮನ್ ಡಾ. ಅನೀಸ್ ಬೆಲ್, ಸಮ್ಮೇಳನದ ಆಯೋಜಕ ಡಾ.ಎಂ.ಎಸ್.ರಘು, ಡಾ.ಲಕ್ಷ್ಮಿ, ಡಾ ಅಜಯ್, ಡಾ.ಪ್ರವಿಣ್, ಡಾ.ಹರೀಶ್ ಡರ್ಲಾ, ಡಾ. ಶ್ರುತಿ ಇನ್ನಿತರರು ಇದ್ದರು. ಈ ಸಮ್ಮೇಳನದಲ್ಲಿ ಎಂಡೋಕ್ರೈನ್ ತೊಂದರೆಗಳಾದ ಮಧುಮೇಹ, ಥೈರಾಯ್ಡ್, ಪಿಶಿಓಡಿ ಮತ್ತು ಇತರೆ ಹಾರ್ಮೋನ್ ತೊಂದರೆಗಳ ಬಗ್ಗೆ ವೈದ್ಯರಲ್ಲಿ ಹೊಸ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.