ಕಾದ ಭೂಮಿಗೆ ತಂಪೆರೆದ ಮಳೆ
ವಿಜಯಪುರ.ಮೇ೧೨:ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಶನಿವಾರದಂದು ಸಂಜೆ ೪.೩೦ ರ ಸುಮಾರಿಗೆ ತುಂತುರು ಬಾರಿ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಆಗಾಗ ಸುರಿದ ತುಂತುರು ಮಳೆಗೆ ಸ್ವಲ್ಪ ಮಟ್ಟಿಗೆ ಭೂಮಿ ತಂಪೆರಿದಂತಾಗಿದೆ.
ಸಂಜೆ ಆರೂವರೆ ಗಂಟೆಯಾದರೂ ಸುಡು ಬಿಸಿಲಿಗೆ ಹೈರಾಣಗಿದ್ದ ಜನತೆಗೆ ಇದೀಗ ಬೆಳಗ್ಗಿನಿಂದ ಮೋಡ ಕವಿದ ವಾತಾವರಣ ಕಂಡು ಬಂದು ಮಳೆಯಾಗಿರುವುದು ನೆಮ್ಮದಿ ತಂದೊಡ್ಡಿದೆ. ಕೃಷಿ ಬೆಳೆಗಳಿಗೆ ನೀರಿನ ಅಭಾವದಿಂದ ಕಂಗೆಟ್ಟಿದ ರೈತರಿಗೆ ತುಂತುರು ಮಳೆಯಾಗಿರುವುದು ಸಂತಸ ತರಿಸಿದೆ.
ಇನ್ನೂ ಸಂಜೆಯಾಗುತ್ತಲೇ ಮಳೆಯು ಅಬ್ಬರ ಜಾಸ್ತಿಯಾಗುತ್ತಿದ್ದು ಕೆಲಸ ಕಾರ್ಯಗಳಿಗೆ ಹೋಗುವ ಜನತೆಗೆ ಈ ಮಳೆಯಿಂದ ತೊಂದರೆಯಾದರು ಬಿರು ಬಿಸಿಲಿನ ದಗೆಗೆ ಜನರು ಎಷ್ಟೇ ಮಳೆ ಬಂದರು ಪರವಾಗಿಲ್ಲ ಅನ್ನುತ್ತಿದ್ದಾರೆ.
ವಿದ್ಯುತ್ ಕಣ್ಣೇ ಮುಚ್ಚಾಲೆ: ಪಟ್ಟಣ ಸೇರಿದಂತೆ ಗ್ರಾಮೀಣಾ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಳೆ ಬಂದರು ಬೆಸ್ಕಂ ಇಲಾಖೆ ಸರಿಯಾಗಿ ವಿದ್ಯುತ್ ಕಂಬಗಳನ್ನು ಸರಿಪಡಿಸದೇ ಪ್ರತಿದಿನವು ಸಂಜೆಯಾದರೆ ಕೆಲ ಭಾಗಗಳಲ್ಲಿ ವಿದ್ಯುತ್ ಕಡಿತವಾಗುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಕೆಲವರು ಆರೋಪಿಸಿದರು.
ಬಸ್ಸ್ ಸಮಸ್ಯೆ: ಮಳೆ ಕಾರಣ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಿ ಗ್ರಾಮೀಣ ಸೇರಿದಂತೆ ಪಟ್ಟಣ ಸುತ್ತಮುತ್ತಲಿನ ಭಾಗಗಳಿಂದ ಸಾವಿರರೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಚಿಕ್ಕಬಳ್ಳಾಪುರ, ಬೆಂಗಳೂರು ಪ್ರದೇಶಗಳಿಂದ ಬರಬೇಕದರು ಹೋಗಬೇಕದರೆ ಬಸ್ಸ್ ಗಳು ಇಲ್ಲದೆ ಗಂಟಿಗಟ್ಟಲೇ ಕಾಯಬೇಕದ ಪರಿಸ್ಥಿತಿ ಇರುವುದರಿಂದ ಈ ಮಳೆಗಾಲದಲ್ಲಿ ಹೆಚ್ಚಿನ ಬಸ್ಸಗಳ ವ್ಯವಸ್ಥೆ ಮಾಡಬೇಕಾಗಿದೆ ಎಂದರು ಸಾರ್ವಜನಿಕರು ಒತ್ತಾಯಿಸಿದರು.