ಆನೇಕಲ್‌ನಲ್ಲಿ ಅದ್ಧೂರಿ ಬಸವ ಜಯಂತಿ
ಆನೇಕಲ್. ಮೇ. ೧೨- ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೋಂಡನಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರ ಮತ್ತು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಬಸವ ಜಯಂತಿ ಉತ್ಸವ.
ಇನ್ನು ಬಸವ ಜಯಂತಿ ಉತ್ಸವ ಅಂಗವಾಗಿ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ಮತ್ತು ಚಂಡಿವಾದ್ಯದೊoದಿಗೆ ಮಹಿಳೆಯರು ತಲೆ ಮೇಲೆ ಬೆಲ್ಲದ ಆರತಿ ಎತ್ತುಕೊಂಡು ಮಾರಿಯಮ್ಮ ದೇವಾಲಯದಿಂದ ಬಸವೇಶ್ವರ ದೇವಾಲಯವರೆಗೆ ಮೆರವಣಿಗೆ ನಡೆಸಲಾಯಿತು. ಹಾಗೆಯೇ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಮಾಡಲಾಗಿತ್ತು ಮತ್ತು ಕೋಲಾಟ ಕಾರ್ಯಕ್ರಮ, ಅನ್ನದಾಸೋಹ, ಅರವಂಟಿಕೆ ಸೇರಿದಂತೆ ಹಲವು ವಿಶೇಷ ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಹೆಚ್.ಆರ್, ಗೋವಿಂದರಾಜ್. ಹೆಚ್.ಆರ್,ಬಸವರಾಜು. ಶ್ರೀನಾಥ್ ರೆಡ್ಡಿ. ಲಷ್ಮಿನಾರಾಯಣ. ಶ್ರೀನಿವಾಸ್. ವೇದ ಕೇಶವಮೂರ್ತಿ. ಹೆಚ್.ಎಂ.ನಾಗರಾಜ್. ಹೆಚ್.ಕೆ.ನಾರಾಯಣಸ್ವಾಮಿ. ಶಶಾಂಕ್ ಮತ್ತು ಹೆಗ್ಗೋಂಡನಹಳ್ಳಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಮತ್ತು ಭಕ್ತರು ಬಾಗವಹಿಸಿದ್ದರು.