ರೆಡ್ ಕ್ರಾಸ್ ಮಾನವೀಯ ನೋವಿಗೆ ಸ್ಪಂದಿಸುವ ಸಂಸ್ಥೆ :ಡಾ. ವಿದ್ಯಾ ಪಾಟೀಲ
ಬೀದರ:ಮೇ.12:ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ ಘಟಕದಿಂದ ನಗರದ ಎಸ್.ಬಿ.ಪಾಟೀಲ ದಂತ ಮಹಾವಿದ್ಯಾಲಯದಲ್ಲಿ ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ ಜಿಲ್ಲಾಧ್ಯಕ್ಷೆ ಡಾ. ವಿದ್ಯಾ ಪಾಟೀಲ, ರೆಡ್ ಕ್ರಾಸ್ ರೆಡ್ ಕ್ರಾಸ್ ಸಂಸ್ಥೆಯು ಯುದ್ಧ, ಪ್ರಕೃತಿ ವಿಕೋಪ, ಆರೋಗ್ಯ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾನವೀಯ ನೋವಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದು ನುಡಿದರು. ಬೀದರ ಜಿಲ್ಲೆಯಲ್ಲಿ ಪ್ರೌಡ ಶಾಲೆಗಳಲ್ಲಿ ‘ಜೂನಿಯರ್ ವಿಂಗ್’ ಹಾಗೂ ಕಾಲೇಜುಗಳಲ್ಲಿ ‘ಯೂಥ್ ವಿಂಗ್’ ಮೂಲಕ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ವೀರಶೆಟ್ಟಿ ಮೈಲೂರ್‍ಕರ, ಇಂದು ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವವಹಿಸುತ್ತಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಜಿನ್ ಹೆನ್ರಿ ಡ್ಯೂನಂಟ್ ಅವರು ಸ್ಥಾಪಿಸಿದರು, ಅವರ ಜನ್ಮ ದಿನವಾದ ಮೇ 8 ರಂದು ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ವಿಶ್ವ ಪದೇ ಪದೇ ಪ್ರಕೃತಿ ವಿಕೋಪಗಳು, ಬಿಸಿಲಿನ ತಾಪ ಉಂಟಾಗುತ್ತಿದೆ, ಅದರಿಂದ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು. ಸೋಮನಾಥ ಶಿಕ್ಷಣ ನ್ಯಾಸದ ಅಧ್ಯಕ್ಷ ಡಾ ಸೂರ್ಯಕಾಂತ ಜಿ ಪಾಟೀಲ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಯಾವುದೆ ಜಾತಿ, ಧವರ್i ಎನ್ನದೆ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುತ್ತಿದೆ, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು. ಡಾ ಶÀರಸಚಂದ್ರ ಸ್ವಾಗತಿಸಿದರು. ಡಾ. ಪುಟ್ಟರಾಜ ಕಟ್ಟಿಮನಿ ವಂದಿಸಿದರು. ಸ್ನಾತಕೊತ್ತರ ವಿದ್ಯಾರ್ಥಿನಿಯರಾದ ಡಾ. ಉಜ್ಮಾ ಹಾಗೂ ಡಾ. ವರ್ಷಿಣಿ ನಿರೂಪಿಸಿದರು. ಡಾ. ಪ್ರಸನ್ನಕುಮಾರಿ, ಡಾ ಋತಿಕಾ, ಡಾ ಅಮರನಾಥ, ಡಾ ಸಿದ್ರ್ಧಾಥ್, ಸುರೇಶ ಶಿಗಲಿ, ಸಂಗಮೇಶ ನೇಳಗೆ, ವೈಜಿನಾಥ ಪಾಟೀಲ, ದಂತ ಮಹಾವಿದ್ಯಾಲಯದ ಸಿಬ್ಬಂದಿಯವರು, ವಿದ್ಯಾರ್ಥಿಗಳು ಭಾಗವಹಿಸಿದರು.